
ಚಾಮರಾಜನಗರ: ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರೆಜಿಮೆಂಟ್ ನಲ್ಲಿ ದೇಶದ ಪ್ರಥಮ ಗುಢಾಚಾರಿಣಿ ರಾಗಿ ಸೇವೆ ಸಲ್ಲಿಸಿ ಅಪ್ರತಿಮ ದೇಶಭಕ್ತರಾದ ನೀರಾಆರ್ಯರವರ ದೇಶ ಸೇವೆ ಮರೆಯಲಾಗದು ಎಂದು ನಿವೃತ್ತ ಮುಖ್ಯ ಶಿಕ್ಷಕರು, ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀಮತಿ ವಿಜಯಲಕ್ಷ್ಮಿ ತಿಳಿಸಿದರು.
ಅವರು ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಅಪ್ರತಿಮ ವೀರ ಸೈನಿಕರಾದ ನೀರಾ ಆರ್ಯ ರವರ ಜನ್ಮದಿನದಲ್ಲಿ ಪುಷ್ಪವನ್ನು ಅರ್ಪಿಸಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಅತ್ಯಂತ ಕಷ್ಟಕರವಾದ ಹಿಂಸೆಗೆ ಒಳಗಾದ ನೀರಾ ಆರ್ಯರವರನ್ನು ಬ್ರಿಟಿಷರು ಅತ್ಯಂತ ಹೀನಾಯವಾಗಿ ನಡೆಸಿಕೊಂಡರು. ದೇಶಪ್ರೇಮದ ನೀರಾ ಆರ್ಯ ನೇತಾಜಿಯವರ ಬಗ್ಗೆ ಯಾವುದೇ ರಹಸ್ಯವನ್ನು ಬಿಟ್ಟು ಕೊಡದೆ ಇಂಡಿಯನ್ ನ್ಯಾಷನಲ್ ಆರ್ಮಿಯ ಶ್ರೇಷ್ಠ ಸೈನಿಕರಾಗಿ ಸೇವೆ ಸಲ್ಲಿಸಿದ ಮಹಾನ್ ವೀರ ಗೂಡಾಚಾರಿಣಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ವಹಿಸಿ ಮಾತನಾಡುತ್ತ ನೀರ ಆರ್ಯ ಭಾರತದ ಹೆಮ್ಮೆಯ ವೀರ ವನಿತೆ. ಸುಭಾಷ್ ಚಂದ್ರ ಬೋಸ್ ರವರ ರಹಸ್ಯವಿಷಯಗಳನ್ನು ತಿಳಿಸಲು ನಿರಾಕರಿಸಿದ ನೀರಾ ರವರನ್ನು ಅಂಡಮಾನ್ ಜೈಲಿಗೆ ಕಳುಹಿಸಲಾಯಿತು. ನೀರಾ ಆರ್ಯ ರವರ ಸ್ತನಗಳನ್ನು ಕತ್ತರಿಸುವ ಮೂಲಕ ಅಟ್ಟಹಾಸ ಮೆರೆದ ಬ್ರಿಟಿಷರ ಕ್ರೂರ ಹಿಂಸೆಗೆ ಒಳಗಾದವರು ನೀರ ಆರ್ಯ. ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಪ್ರಾಣತೆಗೆಯಲು ಹಾರಿಸಿದ ಗುಂಡು ಸುಭಾಷ್ ಅವರ ಚಾಲಕನಿಗೆ ತಗುಲಿ ಪ್ರಾಣ ಅರ್ಪಣೆಯಾಯಿತು. ಸುಭಾಷ್ ರವರನ್ನು ರಕ್ಷಿಸಲು ನೀರಾ ರವರು ಬ್ರಿಟಿಷ್ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತನ್ನ ಪತಿಯನ್ನೇ ಕೊಂದು ಹಾಕಿದ ಧೀರ ಮಹಿಳೆ. ಭಾರತದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಹಿಳೆಯರ ತ್ಯಾಗ ಬಲಿದಾನವನ್ನು ನಾವೆಲ್ಲರೂ ಮರೆಯಬಾರದು. ಪ್ರತಿ ಮನೆಮನೆಗಳಲ್ಲೂ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾನ್ ವೀರರನ್ನು ಸ್ಮರಿಸಿಕೊಳ್ಳುವ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕು . ಇತ್ತೀಚೆಗೆ ನಟಿ ರೂಪ ಅಯ್ಯರ್ ರವರು ನೀರ ಆರ್ಯ ರವರ ಹೋರಾಟದ ಕುರಿತು ಆಜಾದ್ ಭಾರತ್ ಎಂಬ ಜೀವನ ಚರಿತ್ರೆಯ ಚಲನಚಿತ್ರವನ್ನು ತೆಗೆದಿರುವುದು ಸಂತೋಷವಾಗಿದೆ . ಪ್ರತಿಯೊಬ್ಬ ಭಾರತೀಯರು ಆಜಾದ್ ಭಾರತ್ ಚಲನಚಿತ್ರವನ್ನು ವೀಕ್ಷಿಸಬೇಕಾಗಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ಸರಸ್ವತಿ, ಕುಸುಮ,ಶಿಕ್ಷಕರಾದ ಮಂಜುಳ, ಬೋಜರಾಜ್, ಬಿಕೆ ಆರಾಧ್ಯ , ಭರತ್ ಜೈನ್ ಹಾಗೂ ಶ್ರಾವ್ಯ ಋಗ್ವೇದಿ ಇದ್ದರು.




