
ಬೆಲ್ಲದಿಂದ ಬಹಳ ಉಪಯೋಗಗಳಿದ್ದು ಕೆಲವರು ಊಟದ ನಂತರ ಸಹಿ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ ಅದರಿಂದಾಗಿ ಮನೆಯಲ್ಲೆ ಲಭ್ಯವಿರುವ ಸಕ್ಕರೆ ಅಥವಾ ಬೆಲ್ಲವನ್ನು ಬಾಯಿಗೆ ಹಾಕಿಕೊಂಡು ಸಿಹಿಯನ್ನು ಸವಿಯುತ್ತಾರೆ. ಇದು ಆರೋಗ್ಯಕ್ಕೆ ಬಹಳ ಉಪಯೋಗಕಾರಿಯಾಗಿದ್ದು. ಬೆಲ್ಲವು ಬಹಳ ಆರೋಗ್ಯಕರವಾದ ಸಿಹಿತಿನಿಸಾಗಿದೆ. ಇದರಲ್ಲಿ ಕಬ್ಬಿಣ, ರಂಜಕ, ಕ್ಯಾಲ್ಸಿಯಂ ಹಾಗೂ ಜೀವಸತ್ವಗಳಂತಹ ಪೋಷಕಾಂಶಗಳನ್ನು ಹೊಂದಿದೆ. ಭಾರತೀಯ ಆಹಾರದ ಬಹುಮುಖ್ಯ ಭಾಗವಾಗವೂ ಆಗಿದೆ. ಊಟದ ನಂತರ ಒಂದು ತುಂಡು ಬೆಲ್ಲ ಸೇವನೆಯಿಂದಾಗಿ ರಕ್ತದೊತ್ತಡವನ್ನು ನಿಯಂತ್ರಿಸ ಬಹುದಾಗಿದೆ. ಬೆಲ್ಲವು ಪೊಟ್ಯಾಶಿಯಮ್ನ ಉತ್ತಮ ಮೂಲವಾಗಿದ್ದು, ನೈಸರ್ಗಿಕವಾಗಿ ರಕ್ತದೊತ್ತಡವನ್ನು ನಿವಾರಿಸುತ್ತದೆ. ಇದು ನಾಲಿಗೆಯ ರುಚಿಯನ್ನು ಕೂಡಾ ಸುಧಾರಿಸುತ್ತದೆ ಹಾಗೂ ಆಯಾಸವನ್ನು ಹೋಗಲಾಡಿಸುತ್ತದೆ. ರಕ್ತಹೀನತೆಯನ್ನು ತಡೆಯಲು ಸಹಾಯಮಾಡುತ್ತದೆ. ಇದರಲ್ಲಿ ಕಬ್ಬಿಣದ ಅಂಶ ಕೂಡಿರುತ್ತದೆ. ಬೆಲ್ಲವು ದೇಹದಿಂದ ಟಾಕ್ಸಿನ್ ಹೊರಹಾಕಲು ಸಹಾಯ ಮಾಡುತ್ತದೆ. ಇದು ಯಕೃತ್ನ್ನು ಶುದ್ಧೀಕರಿಸುತ್ತದೆ. ಹಾಗೆಯೇ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಣೆಗೊಳಿಸುತ್ತದೆ.