
ಇಸ್ರೋ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ಹಾಗೂ ಇಂಜಿನೀಯರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶುರುವಾಗಿದ್ದು. ಬಾಹ್ಯಾಕಾಶ ವಲಯದಲ್ಲಿ ಕೆಲಸ ಮಾಡುಲು ಕನಸು ಕಾಣುತ್ತಿರುವವರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಂತಾಗಿದೆ. ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಜುಲೈ 14 ರೊಳಗೆ ಆನ್ಲೈನ್ ಮೂಲಕ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಎಂಜಿನೀಯರಿಂಗ್ ಪದವಿ(ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಅಥವಾ ಕಂಪ್ಯೂಟರ್ ಸೈನ್ಸ್) ಬಿಇ/ಬಿಟೆಕ್ ಅಥವಾ ತತ್ಸಮಾನ ಪದವಿ ಅಥವಾ ಸಿಜಿಪಿಎ 6.84/10 ಅನ್ನು ವಿಶ್ವವಿದ್ಯಾಲಯದಿಂದ ಪಡೆದಿದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಸ್ರೋ ಅಧಿಕೃತ ಜಾಲತಾಣ(isro.gov.in) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 39 ವಿಜ್ಞಾನಿ/ ಎಂಜಿನಿಯರ್ ಹುದ್ದೆಗಳು ಖಾಲಿ ಇದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ ಗರಿಷ್ಟ 28 ವರ್ಷ ವಯಸ್ಸಾಗಿರಬೇಕು. ಎಸ್ಸಿ ಹಾಗೂ ಎಸ್ಟಿ ಗರಿಷ್ಟ 33 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 31 ವರ್ಷ, ಮಾಜಿ ಸೈನಿಕರು ಹಾಗೂ ದಿವ್ಯಾಂಗರಿಗೆ ಸರ್ಕಾರಿ ನಿಯಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಈ ಮೂಲಕ ಕನಸಿನ ಕೆಲಸವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.