
ಇಸ್ರೇಲ್ ಹಾಗೂ ಇರಾನ್ ಯುದ್ಧವು ದಿನದಿಂದ ದಿನಕ್ಕೆ ರೋಚಕ ತಿರುವನ್ನು ಪಡೆಯುತ್ತಿದೆ. ಇದರಲ್ಲಿ ಮುಸ್ಲಿಂ ರಾಷ್ಟ್ರಗಳು ಒಂದಾಗುತ್ತಿದ್ದು, ಈಗ ನೆರೆಯ ಶತ್ರುರಾಷ್ಟ್ರವಾದ ಪಾಕಿಸ್ತಾನವು ಇರಾನ್ ಬೆಂಬಲಕ್ಕೆ ಬಂದಿದೆ! ಈ ಹಿಂದೆ ಇಸ್ರೇಲ್, ಇರಾನ್ ಕಚ್ಚಾ ತೈಲ ಸಂಗ್ರಹ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ, ಇರಾನ್ ಭಾರಿ ಪ್ರಮಾಣದ ಹೊಡೆತವನ್ನು ಅನುಭವಿಸಿದೆ. ಇಷ್ಟಾದರೂ ಯುದ್ಧವನ್ನು ನಿಲ್ಲಿಸುವಲ್ಲಿ ಆಲೋಚಿಸದ ಇಸ್ರೇಲ್ ಹಾಗೂ ಇರಾನ್ ಹಿಂದಿಗಿಂತಲು ಭಾರಿ ಪ್ರಮಾಣದ ಸಂಘರ್ಷ ಎದುರಾಗುವ ಸಾಧ್ಯತೆ ಇದೆ.
ಇದರಿಂದಾಗಿ ಭಾರತಕ್ಕೆ ಪೆಟ್ರೋಲ್, ಡೀಸಲ್ ಹಾಗೂ ಚಿನ್ನದ ದರದಲ್ಲಿ ಭಾರಿ ಹೆಚ್ಚಳದ ಭೀತಿ ಎದುರಾಗಿದೆ. ಭಾರತವು ರಾಜತಾಂತ್ರಿಕ ಹಾಗೂ ವಾಣಿಜ್ಯ ವಿಚಾರಗಳಲ್ಲಿ ತಟಸ್ಥ ನಿಲುವನ್ನು ಹೊಂದಿದ್ದು. ಭಾgತದ ವಿದೇಶಾಂಗ ನೀತಿಯು ಎರಡು ದೇಶಗಳ ನಡುವೆ ಸಂಘರ್ಷ ಮೂಡುವ ವಿಚಾರದಲ್ಲಿ ಮೊದಲಿನಿಂದಲೂ ಹೆಚ್ಚು ಕಾಳಜಿಯನ್ನು ಇಟ್ಟುಕೊಂಡು ಬಂದಿದೆ. ಸೋಮವಾರ ಏಷ್ಯಾದಲ್ಲಿ ಅಂದಾಜು ೧ ಪ್ರತಿಶತದಷ್ಟು ಕಚ್ಚಾ ತೈಲ ಬ್ಯಾರೆಲ್ ಬೆಲೆ ಹೆಚ್ಚಳವಾಗಿದೆ. ಇದರಿಂದಾಗಿ ಸಹಜವಾಗಿಯೇ ವಿಶ್ವಾದ್ಯಂತ ತೈಲ ಬೆಲೆ ಏರಿಕೆಯಾಗುತ್ತಿದೆ.