
ದಿನನಿತ್ಯ ಅಡುಗೆಗೆ ಬಳಸುವ ತರಕಾರಿಗಳಲ್ಲಿ ಈರುಳ್ಳಿ ಕೂಡ ಒಂದು. ಇದು ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಹಿತ . ಆದರೆ ಈರುಳ್ಳಿ ಬೆಲೆ ಗ್ರಾಹಕರಿಗೆ ಅಹಿತವಾಗಿದೆ. ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ನೀರುಪಾಲಾಗಿದ್ದಲ್ಲದೆ, ಕೊಳೆತು ಹಾಳಾಗುತ್ತಿದೆ. ಹೀಗಾಗಿ ರಾಜ್ಯದ ರೈತರಿಂದ ಖರೀದಿಸುವ ಈರುಳ್ಳಿ ದರ ನೆಲಕಚ್ಚಿದೆ. ಕ್ಷಿಂಟಾಲ್ ಗೆ 3 ಸಾವಿರ ರೂ ಆಗಿದ್ದು, ಈರುಳ್ಳಿ ಬೆಳೆದ ರೈತರ ಕಣ್ಣಂಚಲ್ಲಿ ನೀರು ತರಿಸಿದೆ. ಈರುಳ್ಳಿ ಕೊಳೆಯುತ್ತಿರುವುದರಿಂದ ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳಲಾಗ್ತಿದ್ದು, ಕ್ವಿಂಟಾಲ್ ಗೆ 5 ಸಾವಿರದಿಂದ 6 ಸಾವಿರ ದರವಿದೆ. ಹೀಗಾಗಿ ಕೆಜಿಗೆ 80ರೂಪಾಯಿಗೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಈರುಳ್ಳಿ ಬೆಳೆದ ರಾಜ್ಯದ ರೈತರು, ಕೊಳ್ಳುವವರ ಕಣ್ಣಂಚಲ್ಲಿ ಈರುಳ್ಳಿ ನೀರು ತರಿಸಿದಂತು ಸುಳ್ಳಲ್ಲ. ಒಂದೆಡೆ ಈರುಳ್ಳಿ ಬೆಲೆ ಕುಸಿತಗೊಂಡಿದ್ದರೆ ಇನ್ನೊಂದೆಡೆ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆ.ಜಿ ಬೆಳ್ಳುಳ್ಳಿ ಬೆಲೆ 430 ರೂ ಆಗಿದೆ. ಮತ್ತೊಂದೆಡೆ ಕೊಂಚ ಪ್ರಮಾಣದಲ್ಲಿ ಕೆಲವು ತರಕಾರಿಗಳ ಬೆಲೆ ಇಳಿಕೆಯಾಗುತ್ತಿದೆ.