
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾಲದಲ್ಲಿ, ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವಂತಹ ಬದಲಾವಣೆಗಳು ನಡೆದವು. ಅನೇಕ ರಾಷ್ಟ್ರಗಳ ಮೇಲೆ ಸುಂಕ ಹೇರಲಾಗಿದ್ದು, ಭಾರತಕ್ಕೂ ಶೇ. 50ರಷ್ಟು ಸುಂಕ ವಿಧಿಸಲಾಗಿತ್ತು. ಇದರಿಂದ ಜಾಗತಿಕ ಆರ್ಥಿಕತೆ ಉದ್ವಿಗ್ನಗೊಂಡಿದ್ದು, ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಈ ಕುರಿತಾಗಿ ಮುಂಚೆಯೇ ಭವಿಷ್ಯ ನುಡಿದಿದ್ದರು ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಅವರು ಪ್ರಾಕೃತಿಕ ವಿಕೋಪಗಳು ಮತ್ತು ದೇಶದ ಅಂತರರಾಷ್ಟ್ರೀಯ ಸಂಬಂಧಗಳ ಬದಲಾವಣೆಯು ಜಾಗತಿಕ ಆರ್ಥಿಕತೆಯಲ್ಲಿ ಬೆಳವಣಿಗೆ ಹಾಗೂ ಸಂಘರ್ಷಗಳಿಗೆ ಕಾರಣವಾಗಬಹುದು ಎಂದು ಸೂಚಿಸಿದ್ದರು. ಆ ಮೂಲಕ ಉಕ್ರೇನ್-ರಷ್ಯಾ ಯುದ್ಧದ ಪರಿಣಾಮವಾಗಿ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ರಷ್ಯಾದ ವಿರುದ್ಧ ತಿರುಗಿದ್ದು, ರಷ್ಯಾ ಜೊತೆ ವ್ಯಾಪಾರ ನಡೆಸುತ್ತಿರುವ ಭಾರತಕ್ಕೂ ಸುಂಕದ ಬರೆ ಇಟ್ಟಿದ್ದಾರೆ. ಈ ಎಲ್ಲ ಘಟನಾವಳಿಗಳನ್ನು ಕೋಡಿಶ್ರೀಗಳ ಭವಿಷ್ಯದೊಂದಿಗೆ ಹೋಲಿಸಲಾಗುತ್ತಿದೆ. ಜಾಗತಿಕವಾಗಿ ಉಗ್ರದಾಳಿಗಳು, ಭೂಕಂಪಗಳು, ರಾಜಕೀಯ ಏರಿಳಿತಗಳು ಸಂಭವಿಸುತ್ತಿದ್ದಂತೆ, ಬಾಬಾ ವಂಗಾ ಮತ್ತು ರಿಯೋ ಟುಟ್ಸುಕಿ ಕೂಡಾ ಕೆಲವೊಂದು ಭವಿಷ್ಯಗಳನ್ನು ನುಡಿದಿದ್ದರು. ಪೆಸಿಫಿಕ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಗೆ ಸಂಬಂಧಿಸಿದ ಎಚ್ಚರಿಕೆಗಳು, ಕೋಡಿಶ್ರೀಗಳ ಮಾತುಗಳಿಗೆ ತಾಳೆ ಹಾಕುವಂತೆ ಮಾಡುತ್ತಿದೆ. ಈ ಎಲ್ಲ ಸನ್ನಿವೇಶಗಳ ನಡುವೆ ಭಾರತ ತಪೋಭೂಮಿಯಾಗಿರುವುದರಿಂದ ಹೆಚ್ಚಿನ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಬಹುದು ಎಂಬ ಭರವಸೆಯ ಮಾತು ಕೂಡ ಶ್ರೀಗಳಿಂದ ವ್ಯಕ್ತವಾಯಿತು. ಆದರೆ ಭಾರತೀಯರು ಸದಾ ಜಾಗರೂಕರಾಗಿರಬೇಕು ಎಂಬ ಸೂಚನೆಯೂ ನೀಡಲಾಯಿತು.