ಮೂಡಿಗೆರೆ: ತಾಲೂಕಿನ ಟೌನ್ ಸಮೀಪದ ಕೆ.ಎಂ. ರಸ್ತೆಯ ಸಿದ್ದಾರ್ಥ ವನದ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ರಮ ಮರ ಸಾಗಣೆಯ ವಿರುದ್ಧ ದಾಳಿ ನಡೆಸಿ, ಪರ್ಮಿಟ್ ಇಲ್ಲದೇ ಸಾಗಿಸುತ್ತಿದ್ದ ಹಲಸಿನ ಸೈಜುಗಳನ್ನು ಜಪ್ತಿ ಮಾಡಿರುವ ಘಟನೆ ಏಪ್ರಿಲ್ 9, 2026 ರಂದು ರಾತ್ರಿ ಸುಮಾರು 8 ಗಂಟೆಗೆ ಬೆಳಕಿಗೆ ಬಂದಿದೆ; KA-46-6177 ಸಂಖ್ಯೆಯ ಬೊಲೆರೋ ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಒಟ್ಟು 45 ಅಡಿ ಉದ್ದದ ಹಲಸಿನ ಸೈಜುಗಳನ್ನು ವಶಕ್ಕೆ ಪಡೆದು ಅಮಾನತ್ ಮಾಡಲಾಗಿದ್ದು, ಅವುಗಳ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 1 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ, ಪ್ರಕರಣ ಸಂಬಂಧವಾಗಿ ವಾಹನದಲ್ಲಿದ್ದ ಹಳೆಯ ಮೂಡಿಗೆರೆ ನಿವಾಸಿ ಶಿವಪ್ಪ ಹಾಗೂ ಗುತ್ತಿ ಗ್ರಾಮದ ವಿಕ್ರಮ್ ಜಿ.ಸಿ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಈ ಕಾರ್ಯಾಚರಣೆಯನ್ನು ಡಿಸಿಎಫ್ ರಮೇಶ್ ಬಾಬು ಮತ್ತು ಎಸಿಎಫ್ ಆಕರ್ಷ್ ಅವರ ಮಾರ್ಗದರ್ಶನದಲ್ಲಿ ಆರ್ಎಫ್ಒ ಮಂಜುನಾಥ್ ಜಿ ಅವರ ನೇತೃತ್ವದಲ್ಲಿ ಡೈಆರ್ಎಫ್ಒಗಳಾದ ಅಶ್ವಥ್, ಬಗಲಿ, ಬೀಟ್ ಫಾರೆಸ್ಟರ್ಗಳಾದ ಪರಮೇಶ್, ಸುರೇಶ್, ವಾಚರ್ ಉದಯ್ ಹಾಗೂ ವಾಹನ ಚಾಲಕರಾದ ಸುಮಂತ್ ಮತ್ತು ನವರಾಜ್ ಅವರ ತಂಡ ಯಶಸ್ವಿಯಾಗಿ ನಡೆಸಿದ್ದು, ಅಕ್ರಮ ಮರ ಸಾಗಣೆಯನ್ನು ತಡೆಗಟ್ಟಲು ಮುಂದುವರಿದ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
