
ಶಿರಸಿ/ನವದೆಹಲಿ: ಇಂದು ನವದೆಹಲಿಯಲ್ಲಿ ಮಾನ್ಯ ಸಂಸದರುಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀ ಬಿ ವೈ ರಾಘವೇಂದ್ರ, ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟಾ ಇವರುಗಳ ನೇತೃತ್ವದಲ್ಲಿ ಶಿರಸಿ ಹಾಗೂ ಸಾಗರ ಪ್ರಾಂತ್ಯದ ರೈತ ಪ್ರತಿನಿಧಿಗಳಾದ ಶ್ರೀ ಎಚ್ಎಸ್ ಮಂಜಪ್ಪ ಸೊರಬ ಹಾಗೂ ಟಿಎಸ್ಎಸ್ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ವೈದ್ಯ ಇವರಿರುವ ನಿಯೋಗವು ಕೇಂದ್ರ ಕೃಷಿ ಸಚಿವರಾದ ಮಾನ್ಯ ಶಿವರಾಜ್ ಸಿಂಗ್ ಚೌಹಾಣ್ ಇವರನ್ನು ಭೇಟಿ ಮಾಡಿ ಅಡಿಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೃಷಿ ಸಚಿವರ ಗಮನ ಸೆಳೆದರು . ಅಕ್ರಮವಾಗಿ ಆಮದಾಗುತ್ತಿರುವ ಅಡಿಕೆಯನ್ನು ತಡೆಯಬೇಕು ಮತ್ತು ಎಫ್.ಎಸ್.ಎಸ್.ಐ ಅವರು ಈಗ ನಿರ್ದಿಷ್ಟ ಪಡಿಸಿದ ಆರ್ದ್ರತೆ ಪ್ರಮಾಣ 07% ಇಂದ 11%ಗೆ ಏರಿಸುವಂತೆ ಮನವಿ ನೀಡಿದರು ಹಾಗೂ ಮೈಲುತುತ್ತದ ಮೇಲೆ ಈಗ ವಿಧಿಸುತ್ತಿರುವ ಜಿಎಸ್ಟಿ ಅನ್ನು 18% ರಿಂದ 05% ಗೆ ಇಳಿಸಲು ಮನವಿ ಸಲ್ಲಿಸಲಾಯಿತು. ನಂತರ ಅಡಿಕೆ ಕೃಷಿಕರು ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳ ಕುರಿತು ಮಾನ್ಯ ಕೃಷಿ ಸಚಿವರ ಗಮನಕ್ಕೆ ತರಲಾಯಿತು. ಈ ಎಲ್ಲಾ ವಿಷಯಗಳ ಬಗ್ಗೆ ಮಾನ್ಯ ಕೃಷಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಅಡಿಕೆ ಬೆಳೆಗಾರರು ಎದುರಿಸಿತ್ತಿರುವ ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು.
ಈ ನಿಯೋಗದಲ್ಲಿ ಯು.ಟಿ.ರಾಮಪ್ಪ, ಶ್ರೀ ಅನಿಲ್ ಒಡೆಯರ್, ಶ್ರೀ ಮಲ್ಲಿಕಾರ್ಜುನ ಸಾಗರ, ಟಿಎಸ್ಎಸ್ ನಿರ್ದೇಶಕರುಗಳಾದ ಶ್ರೀ ನರಸಿಂಹ ಹೆಗಡೆ, ಶ್ರೀ ಪ್ರಕಾಶ ಹೆಗಡೆ ಹುಳುಗೋಳ ಹಾಗೂ ಟಿಎಸ್ಎಸ್ನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಗಿರೀಶ್ ಹೆಗಡೆ ಉಪಸ್ಥಿತರಿದರು.