ಕಡೂರು: ತಾಲ್ಲೂಕಿನ ಕೋಟೆಯ ಶಂಕರ ಮಠ ಸಭಾ ಭವನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಜೀವನದಲ್ಲಿ ಸ್ವಲ್ಪ ಸಮಯವಾದರು ಆ ಭಗವಂತನ ಚಿಂತನೆಯಲ್ಲಿ ತೊಡಗಿದರೆ ನಮ್ಮ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ. ಲೌಕಿಕ ಜಗತ್ತಿನಲ್ಲಿ ಹೇಗೆ ಕಾನೂನುಗಳಿವೆಯೋ ಹಾಗೆಯೇ ಶಾಸ್ತ್ರದಲ್ಲೂ ನಿಯಮಗಳಿವೆ, ಅದನ್ನು ಅರಿತು ಪಾಲಿಸಿದರೆ ಭಗವಂತನ ಕೃಪೆ ದೊರೆಯುತ್ತದೆ. ಜೀವನದಲ್ಲಿ ಕೃತಜ್ಞತಾ ಭಾವ ಬೆಳಸಿಕೊಂಡು ಸಧರ್ಮದಿಂದ ತಮ್ಮ ಕರ್ತವ್ಯ ಪಾಲಿಸಿ ಅದರ ಫಲಾಫಲಗಳನ್ನು ದೇವರಿಗೆ ಬಿಡಬೇಕು ಎಂದರು. ಈ ಸಂದರ್ಭದಲ್ಲಿ ಕಲಾವಿದ ಚಿಕ್ಕಂಗಳ ಪ್ರಮೋದ್ ರಚಿಸಿದ ಕಲಾಕೃತಿಯನ್ನು ಶ್ರೀಗಳಿಗೆ ಸಮರ್ಪಿಸಿದರು. ಶಂಕರ ಮಠ ಕಡೂರು ಶಾಖೆಯ ಆಡಳಿತಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
