
ಹೊಸನಗರ: ಇಂದು ಮುಂಜಾನೆ 9..30ಕ್ಕೆ ಹೊಸನಗರ ಸಮೀಪದ ನಿಟ್ಟೂರಿನ ಸಿಗಂದೂರು ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಹೊಳೆ ಹೊನ್ನೂರಿನ ಬುಲೆರೋ ಪಿಕ್ ಅಪ್, ಕೊಲ್ಲೂರಿನಿಂದ ಆಗಮಿಸುತ್ತಿದ್ದ ಬೆಂಗಳೂರಿನ ಬ್ರೀಜಾ ಕಾರು ಹಾಗೂ ಬಲೆನೋ ಕಾರ್ ನಡುವೆ ಭೀಕರ ಅಪಘಾತ ನಡೆದಿದೆ. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಕಂಡು ಬಂದಿಲ್ಲ ಎಂದು ತಿಳಿಸು ಬಂದಿದೆ.
ರಾಣೇಬೆನ್ನೂರು ಹಾಗೂ ಬೈಂದೂರು ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ ಅಪಘಾತಕ್ಕೆ ಕಾರಣವಾಗಿದೆ ಎಂದು ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ಪ್ರದೇಶದಲ್ಲಿ ಪದೇ – ಪದೇ ಅಪಘತಗಳು ಸಂಭವಿಸುತ್ತಿದೆ ಎಂದಿದ್ದಾರೆ. ಇದು ಅಪಾಯದ ತಿರುವಾಗಿದೆ, ಆದರೂ ಒಂದು ಚೂಚನಾ ಫಲಕವೂ ಕೂಡ ಅಲ್ಲಿ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲಿನ ತಡೆಗೋಡೆ ಕುಸಿದು ಹಲವು ವರ್ಷಗಳು ಕಳೆದರೂ ಅದನ್ನು ಸರಿಪಡಿಸುವವರು ಯಾರೂ ಇಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇನ್ನಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ನೀಡಿ ಅಪಘಾತ ತಡೆಯುವಲ್ಲಿ ಗಮನ ಹರಿಸಬೇಕೆಂದರು.