
ರಾಜ್ಯದಲ್ಲಿ ದಿನೇ ದಿನೇ ಹೃದಯಾಘಾತದ ಪ್ರಕರಣಗಳು ಹೆಚ್ಚುತಲೇ ಇದ್ದು, ವಯಸ್ಕರಿಂದ ವೃದ್ಧರವರೆಗೂ ಎಡಬಿಡದೆ ಕಾಡುತ್ತಿದ್ದು, ಇತ್ತೀಚಿಗೆ ಚಿಕ್ಕಮಕ್ಕಳಲ್ಲಿಯೂ ಸಹ ಹೃದಯಾಘಾತ ಪ್ರಕರಣಗಳು ಕಂಡುಬರುತ್ತಿರುವುದು ರಾಜ್ಯಕ್ಕೆ ಅತೀ ದೊಡ್ಡ ಆತಂಕವನ್ನು ತಂದುಕೊಟ್ಟಿದೆ. ಆದರೆ ರಾಜ್ಯ ಸರ್ಕಾರವು ಈ ಕುರಿತಾಗಿ ರಾಜ್ಯದ ಜನರು ಭಯ ಪಡುವ ಅಗತ್ಯವಿಲ್ಲ. “ರಾಜ್ಯದ ಜನರು ಹೆಚ್ಚುತ್ತಿರುವ ಹೃದಯಘಾತ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಸರಾಸರಿ ಅಪಘಾತಗಳು ಹಿಂದಿನ ವರ್ಷದಲ್ಲಿ ಕಂಡುಬಂದಷ್ಟೇ ಪ್ರಕರಣಗಳು ಕಂಡುಬಂದಿವೆ” ಎಂದು ಹೇಳಿದೆ. ಇದೇ ರೀತಿ ಹಾಸನದಲ್ಲೂ ಹೃದಯಾಘಾತ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರೋಗಿಗಳ ಮುಂಜಾಗೃತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ. ಈ ಪ್ರಕರಣಗಳಿಗೂ ಕೋವಿಡ್ ಲಸಿಕೆಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ, ಇದೊಂದು ತಪ್ಪು ತಿಳುವಳಿಕೆ ಎಂದು ಪಾಟೀಲ್ ಸ್ಪಷ್ಟಿಕರಿಸಿದ್ದಾರೆ.
ಹೃದಯಘಾತದ ಭಯ ಬಿಟ್ಟು ಉತ್ತಮ ಜೀವನಶಲಿ, ನಿದ್ರೆ ಮತ್ತು ದೈಹಿಕ ವ್ಯಾಯಾಮ ಮಾಡುವುದು ಅಗತ್ಯ. ಈ ಬಗ್ಗೆ ಜಯದೇವ ಆಸ್ಪತ್ರೆಯಿಂದ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದರು.