
ಹಸಿರು ಫೌಂಡೇಷನ್ ವತಿಯಿಂದ ವಾರ್ಷಿಕ ಸರಾಸರಿ 1 ಲಕ್ಷ ಸಸಿ ನೆಡುವ ವನಮಹೋತ್ಸವದ ಅಂಗವಾಗಿ ದಾರದಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮ ನೆರವೇರಿತು…
ಸಾಂಕೇತಿಕವಾಗಿ ಹಂಡುಗುಳಿ ಶಾಲೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ರತನ್ ಊರುಬಗೆ ಮಾತನಾಡಿ ಹಸಿರು ಫೌಂಡೇಷನ್ ವತಿಯಿಂದ ನಿರಂತರವಾಗಿ ಸಸಿ ನೆಡುತ್ತಾ ಬರುತ್ತಿದ್ದು, ವಾರ್ಷಿಕ ಸರಾಸರಿ ಒಂದು ಲಕ್ಷ ಸಸಿಗಳನ್ನು ನೆಡುವ ಭಾಗವಾಗಿ ಇಂದು ಹಂಡುಗುಳಿ ಶಾಲೆಯಿಂದ ಪ್ರಾರಂಭಿಸಿ,ಹಾಲೂರು, ಮಗ್ಗಲಮಕ್ಕಿ, ಕೃಷ್ಣಾಪುರ ಹೀಗೆ ಎಲ್ಲ ಶಾಲೆಗಳಿಗೂ ಸಸಿ ವಿತರಣೆ ಮಾಡುತ್ತಿದ್ದೇವೆ.
ಶಾಲೆಗಳಲ್ಲಿ ಹಾಗೂಸರ್ಕಾರಿ ಇಲಾಖೆಗಳ ಸಸಿ ನೇಡುವುದರಿಂದ ಸಸಿಗಳ ಪೋಷಣೆ ಸುಲಭವಾಗುತ್ತದೆ.. ಲಕ್ಷ ಸಸಿಗಳನ್ನು ನೆಡುವುದು ಸುಲಭವಲ್ಲ ನಮ್ಮೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು..
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರು ರಂಜನ್ ಅಜಿತ್ ಕುಮಾರ್, ಶಾಲಾ ಶಿಕ್ಷಕರಾದ ಇಂದ್ರ ಕುಮಾರ್, ಪಂಚಾಯ್ತಿ ಉಪಾಧ್ಯಕ್ಷರು ನವಿನಅಶ್ವತ್ , ಸದಸ್ಯರು ಸೌಭಾಗ್ಯ ಗಿರೀಶ್ ಹಂಡುಗುಳಿ ಶಾಲೆಯ ಎಸ್ ಡಿ ಎಂಸಿ ಗಣೇಶ್, ಮಹಮ್ಮದ್ ಆಲಿ, ರಜಾಕ್, ಶಾಲಾ ಸಹ ಶಿಕ್ಷಕರು, ಊರಿನ ಗ್ರಾಮಸ್ಥರು, ವಿದ್ಯಾರ್ಥಿಗಳು, ಹಸಿರು ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್, ಕಾರ್ಯದರ್ಶಿ ಅಭಿಜಿತ್, ರೋಹನ್, ಸಚಿನ್ ಹಾಜರಿದ್ದರು.