
ಮೂಡಿಗೆರೆ: ವನಮಹೋತ್ಸವದ ಭಾಗವಾಗಿ ಹಸಿರು ಫೌಂಡೆಷನ್ ವತಿಯಿಂದ ಸರಾಸರಿ ೧ ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದ್ದು. ಹಸಿರು ಫೌಂಡೇಷನ್ ಅಧ್ಯಕ್ಷರಾದ ರತನ್ ಊರುಬಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಕುರಿತು ಮಾತನಾಡಿದರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಸನ್ನಕುಮಾರ್, ಕೃಷಿಪತ್ತಿನ ಅಧ್ಯಕ್ಷರಾದ ಅಶ್ವಥ್ ಕಾರ್ಬೈಲ್, ಅರಣ್ಯ ಇಲಾಖೆಯ ಶಿವಶಂಕರ್ ಹಾಗೂ ಇನ್ನಿತರು ಭಾಗಿಯಾಗಿದ್ದು ಘಟ್ಟದಹಳ್ಳಿ, ಮಾಕೋನಹಳ್ಳಿ, ಗೌರೀಕೆರೆ ಶಾಲೆಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.