
ಸ್ನೇಹ ಎಂಬುದು ಕೇವಲ ಸಂಬಂಧವಲ್ಲ, ಅದು ಬಾಳಿನ ಒಂದು ಸುಗಂಧದ ಹೂವಂತೆ. ಇಷ್ಟಪಡುವವರ ನಡುವಿನ ತಾತ್ಕಾಲಿಕ ಸಂಪರ್ಕವಲ್ಲ ಸ್ನೇಹ – ಅದು ಮನಸ್ಸಿನಿಂದ ಬರುವ ಭಾವನೆ. ಇಂದು ತಂತ್ರಜ್ಞಾನ, ಸಾಮಾಜಿಕ ಜಾಲತಾಣಗಳ ನಡುವೆ ನಾವು ಸಾವಿರಾರು ಜನರೊಂದಿಗೆ ಸಂಪರ್ಕದಲ್ಲಿದ್ದರೂ, ನಿಜವಾದ ಸ್ನೇಹಿತರ ಸಂಖ್ಯೆ ಗುಣಮಟ್ಟದಿಂದ ಮಾತ್ರ ಅಳೆಯಬೇಕು, ಸಂಖ್ಯೆಯಿಂದಲ್ಲ.
ಸ್ನೇಹವು ಬಾಳಿನ ಎಲ್ಲ ಹಂತಗಳಲ್ಲಿ ತಮ್ಮ ಪ್ರಭಾವವನ್ನು ಬೀರುತ್ತದೆ. ಬಾಲ್ಯದಲ್ಲಿ ಆಟದ ಮೈದಾನ, ಪಾಠದ ಗದ್ದಲು, ಹಾಸ್ಯ ಹಂಚಿಕೊಳ್ಳುವ ನೆನಪುಗಳು ಎಲ್ಲವೂ ಸ್ನೇಹವನ್ನು ಗಟ್ಟಿಗೊಳಿಸುತ್ತವೆ. ಯುವ ಹಂತದಲ್ಲಿ ಅದು ನಮ್ಮ ಕನಸುಗಳಿಗೇ ಹತ್ತಿರದ ಬೆಂಬಲವಂತೆ ಇರುತ್ತದೆ. ಆಪ್ತ ಸ್ನೇಹಿತನೊಬ್ಬನಿಲ್ಲದ ಬದುಕು ಕಣ್ಮರೆಯಾದ ಹಾಸ್ಯದಂತೆ ಆಗುತ್ತದೆ.ನಿಜವಾದ ಸ್ನೇಹವೆಂದರೆ ಸುಖದ ಸಮಯದಲ್ಲಿದ್ದು, ನಗುವವನು ಅಲ್ಲ! ದುಃಖದಲ್ಲಿ ಮೌನವಾಗಿ ನಮ್ಮ ಕೈಹಿಡಿಯುವವನು. ಸ್ನೇಹದಲ್ಲಿ ಸ್ಥಾನಮಾನ, ಧನ, ವಯಸ್ಸು, ಜಾತಿ ಎಂಬ ಬೇಧಗಳಿಗೇ ಯಾವ ಸ್ಥಾನವಿಲ್ಲ. ಅದು ನಿಭಾಯಿಸಲು ಆಧಾರವಲ್ಲ, ಆದರೆ ಸಹನೆ, ನಿಷ್ಠೆ, ನಿಸ್ವಾರ್ಥತೆ, ಹಾಗೂ ಪರಸ್ಪರ ಗೌರವದ ಮೇಲೆ ಅಡಿಗಲ್ಲು ಇರಿಸಿಕೊಂಡಿರುವ ಸಂಬಂಧ.
ಇಂದಿನ ಓಟದ ಜೀವನದಲ್ಲಿ ಸ್ನೇಹವನ್ನು ಉಳಿಸಿಕೊಳ್ಳುವುದು ಕಷ್ಟವೇ ಆಗಬಹುದು. ಆದರೆ ಒಂದೂ ನಿಮಿಷವಿದ್ದರೆ ಸಾಕು ನಿಜವಾದ ಸ್ನೇಹಿತನಿಗೆ ಕರೆ ಮಾಡುವುದು ಅಥವಾ ಸಂದೇಶ ಕಳಿಸುವುದು, ಸಂಬಂಧವನ್ನು ಜೀವಂತವಾಗಿ ಉಳಿಸುತ್ತದೆ. ಸ್ನೇಹ ಯಾವುದೇ ಲೆಕ್ಕಾಚಾರದ ಹೂಡಿಕೆ ಅಲ್ಲ , ಅದು ನಿಭಾಯಿಸುವ ಹೃದಯದ ಸಂಬಂಧ.
ಜೀವನವೆಂಬ ದಾರಿಯಲ್ಲಿ ನಾವು ಯಾರ ಜೊತೆ ಸಾಗಿದ್ದೇವೆ ಎನ್ನುವುದು ಮುನ್ನಡೆಗಿಂತ ಮುಖ್ಯ. ಸ್ನೇಹಿತರು ನಮ್ಮ ಜೊತೆ ಇದ್ದರೆ, ಬದುಕಿನ ಪ್ರಯಾಣವೂ ಸುಂದರವಾಗುತ್ತದೆ.