
ಗೌರಿ ಹಬ್ಬವನ್ನು ಗಣೇಶ ಚತುರ್ಥಿಯ ಒಂದು ದಿನ ಮೊದಲು ಆಚರಿಸಲಾಗುತ್ತದೆ. ಇದನ್ನು ಮಹಿಳೆಯರ ಹಬ್ಬ ಎನ್ನಲಾಗುತ್ತದೆ. ಎಲ್ಲೆಡೆ ಈ ಹಬ್ಬವನ್ನು ಸಂತೋಷದಿಂದ ಆಚರಿಸುಲಾಗುತ್ತದೆ. ಗೌರಿ ಹಬ್ಬವು ಗಣೇಶನ ತಾಯಿ ಅಂದರೆ ಪಾರ್ವತಿ ದೇವಿಯನ್ನು ಪೂಜಿಸಲಾಗುತ್ತದೆ.
ಈ ಹಬ್ಬದಲ್ಲಿ ತವರು ಮನೆಯವರು ಮಗಳಿಗೆ ಬಾಗಿನವನ್ನು ನೀಡಲು ಬರುತ್ತಾರೆ, ಹಾಗೆಯೇ ಪೂಜೆಯ ಕೊನೆಯಲ್ಲಿ ಸುತ್ತ-ಮುತ್ತಲಿನ ವಿವಾಹಿತ ಮಹಿಳೆಯರನ್ನು ಮನೆಗೆ ಆಹ್ವಾನಿಸಿ ಅರಿಶಿನ ಕುಂಕುಮ ಹಾಗೂ ಸಾಂಪ್ರದಾಯಿಕ ವಸ್ತಗಳನ್ನು ಕೊಡುವುದು ಸಂಪ್ರದಾಯವಾಗಿದೆ. ಗೌರಿ ದೇವಿಯು ತನ್ನ ತವರು ಮನೆಗೆ ಬಂದು, ಮರುದಿನ ಗಣೇಶ ತಾಯಿಯನ್ನು ಕರೆದುಕೊಂಡು ಹೋಗಲು ಬರುತ್ತಾನೆ. ಹಾಗಾಗಿ ಮನೆಯಲ್ಲಿ ಮೊದಲು ಗೌರಿಯನ್ನು ಕೂರಿಸಿ ನಂತರ ಗಣೇಶನನ್ನು ಕೂರಿಸಲಾಗುತ್ತದೆ ಎಂದು ಸಂಪ್ರದಾಯ ಪ್ರಕಾರ ಹೇಳಲಾಗುತ್ತದೆ. ಈ ವ್ರತವನ್ನು ವಿವಾಹಿತ ಮಹಿಳೆಯರು ತಮ್ಮ ಕುಟುಂಬದ ಸುಖ, ಶಾಂತಿ ಹಾಗೂ ಸೌಭಾಗ್ಯಕ್ಕಾಗಿ ವ್ರತವನ್ನು ಆಚರಿಸಲಾಗುತ್ತದೆ.