
ಗೂಗಲ್ ಸಂಸ್ಥೆಯ ತಂತ್ರಜ್ಞಾನ ಆಕಾಶದೆತ್ತರಕ್ಕೆ ಏರಿದ್ದು. ಹೊಸ ನವೀಕರಣೆಯನ್ನು ನೀಡುತ್ತಾ ಬಂದಿದೆ. ಇದು ಜನರಿಗೆ ಹೊಸ ವಿಚಾರಗಳನ್ನು ಹಾಗೂ ವಸ್ತುಗಳನ್ನು ಹುಡುಕಲು ಬಹು ಅವಶ್ಯಕವಾಗಿದೆ. ಹಾಗೆಯೇ ಮತ್ತೊಂದು ಅಪಡೇಟ್ ಕೊಟ್ಟಿರುವ ಗೂಗಲ್ ಸಂಸ್ಥೆ, ಸರ್ಚ್ ಲೈವ್ ವಿತ್ ವಾಯ್ಸ್ ಇನ್ಪುಟ್ ಆಯ್ಕೆ ನೀಡಿದೆ. ಈ ಮೂಲಕ ಆರ್ಟಿಫೀಶಿಯಲ್ ಇಂಟೆಲಿಜೆನ್ಸ ಆಧಾರಿತ ಹಾಗೂ ವಾಯ್ಸ್ ಮೂಲಕ ಸರ್ಚಿಂಗ್ ಆಯ್ಕೆ ನೀಡಲಾಗಿದೆ.
ಗೂಗಲ್ ನೀಡಿರುವ ಈ ಅಪ್ಡೇಟ್ ಭಾರತದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ ಆದರೆ ಅಮೇರಿಕ ಮತ್ತು ಇತರ ದೇಶಗಳಲ್ಲಿ ಲಭ್ಯವಿದೆ. ಬಳಕೆದಾರರು ನೇರವಾಗಿ ಎಐ ಮೂಡ್ ಆಯ್ಕೆ ಮಾಡಿಕೊಂಡು ಅದರಿಂದ ಎಐ ವಾಯ್ಸ್ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಚ್ ಮಾಡಬಹುದಾಗಿದೆ. ಇದರಿಂದಾಗಿ ಗೂಗಲ್ ಜನಸ್ನೇಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.