
ಗಣೇಶ ಚತುರ್ಥಿಯನ್ನು ಗಣೇಶನ ಜನನವನ್ನು ಆಚರಿಸುವ ಮತ್ತು ಅವನನ್ನು ಸ್ಮರಿಸುವ ದಿನವಾಗಿದೆ. ಗಣೇಶನು ಬುದ್ದಿವಂತಿಕೆ ಮತ್ತು ಸಮೃದ್ಧಿಯ ದೇವತೆಯಾಗಿದ್ದು, ಆಚರಣೆಯು ಈ ಗುಣಗಳನ್ನು ಹೆಚ್ಚಿಸುತ್ತದೆ. ಗಣೇಶ ಚತುರ್ಥಿಯನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಗಣಪತಿಯನ್ನು ವಿಘ್ನವಿನಾಶಕ ಎನ್ನುವರು. ಯಾವುದೇ ಶುಭಕಾರ್ಯಕ್ರಮದಲ್ಲಿ ಮೊದಿಗೆ ಪ್ರಾರ್ಥಿಸುವು ವಿಘ್ನವಿನಾಶಕನಾದ ಗಣೇಶನನ್ನು. ಗಣೇಶ ಚತುರ್ಥಿಯ ಬೆಳಗ್ಗೆ ಕಾಯಿ ಕಡಬು ಹಾಗೂ ಅರಶಿನ ಕಡಬನ್ನು ಮಾಡಲಾಗುತ್ತದೆ, ಏಕೆಂದರೆ ಈ ತಿನಿಸುಗಳು ಗಣಪತಿಗೆ ಪ್ರಿಯವಾಗಿದೆ. ಹಲವು ಬಗೆ-ಬಗೆಯ ತಿಂಡಿ ತಿನಿಸುಗಳನ್ನು ಗಣೇಶ ಚತುರ್ಥಿಯಂದು ಮಾಡಲಾಗುತ್ತದೆ. ಮನೆಗಳಲ್ಲಿ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶನನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ. ಹಬ್ಬದ ಕೊನೆಯ ದಿನ ಗಣೇಶನ ಮೂರ್ತಿಯನ್ನು ನದಿ, ಕೊಳ ಅಥವಾ ಸಮುದ್ರಗಳಲ್ಲಿ ವಿಸರ್ಜಿಸಲಾಗುತ್ತದೆ.