
ಬೆಂಗಳೂರು: ಬೊಮ್ಮಸಂದ್ರದ ಸೂರ್ಯನಗರದಲ್ಲಿ 80,000 ಆಸನ ಸಾಮರ್ಥ್ಯದ ವಿಶ್ವದರ್ಜೆಯ ಕ್ರಿಕೆಟ್ ಕ್ರೀಡಾಂಗಣವನ್ನು ಒಳಗೊಂಡ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ನೀಡಿದ್ದಾರೆ. 1,650 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು 100 ಎಕರೆ ಪ್ರದೇಶದಲ್ಲಿ ಕರ್ನಾಟಕ ವಸತಿ ಮಂಡಳಿ ಸಂಪೂರ್ಣವಾಗಿ ಹಣಕಾಸು ಒದಗಿಸಿ ನಿರ್ಮಿಸಲಿದೆ. ಇದು ನರೇಂದ್ರ ಮೋದಿ ಕ್ರೀಡಾಂಗಣದ ನಂತರ ದೇಶದ ಎರಡನೇ ಅತಿದೊಡ್ಡ ಕ್ರಿಕೆಟ್ ಮೈದಾನವಾಗಲಿದ್ದು, ಕ್ರಿಕೆಟ್ ಜೊತೆಗೆ ಎಂಟು ಒಳಾಂಗಣ ಹಾಗೂ ಎಂಟು ಹೊರಾಂಗಣ ಕ್ರೀಡೆಗಳ ಸೌಕರ್ಯ, ಆಧುನಿಕ ಜಿಮ್ಗಳು, ತರಬೇತಿ ಕೇಂದ್ರಗಳು, ಈಜುಕೊಳಗಳು, ಅತಿಥಿ ಗೃಹಗಳು, ಹಾಸ್ಟೆಲ್ಗಳು, ತ್ರೀ-ಸ್ಟಾರ್ ಮತ್ತು ಫೈವ್-ಸ್ಟಾರ್ ಹೋಟೆಲ್ಗಳು, ಅಂತರರಾಷ್ಟ್ರೀಯ ಮಟ್ಟದ ಸಮಾವೇಶ ಸಭಾಂಗಣ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಹೊಂದಿರಲಿದೆ. ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಅವರ ಶಿಫಾರಸಿನಂತೆ ಮೈದಾನವನ್ನು ನಗರದ ಹೊರವಲಯದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನಡೆಯಲಿದೆ.