
ಬೆಂಗಳೂರು: ಬೆಂಗಳೂರು ವಿದಾಯ ಸಮಯದಲ್ಲಿ ಭಾವುಕಳಾಗಿ ಕಣ್ಣೀರಿಟ್ಟ ವಿದೇಶಿ ಪ್ರವಾಸಿ ಮಹಿಳೆ ಅರಿನಾ, ಈ ನಗರವು ಐಟಿ ಕೇಂದ್ರವಾಗಿದ್ದು, ಕಲೆ, ಸಂಸ್ಕೃತಿ, ಜನರ ಆತಿಥ್ಯ ಮತ್ತು ವೈವಿಧ್ಯತೆಯಿಂದ ಕೂಡಿದ ಅನುಭವದ ನೆಲೆಯಾಗಿರುವ ಸ್ಥಳವೆಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕಳೆದ 15 ದಿನಗಳು ತಮ್ಮ ಬದುಕಿನ ಉಲ್ಲಾಸ ಮತ್ತು ಸಂತೋಷವನ್ನು ತುಂಬಿದ ಕ್ಷಣಗಳಾಗಿದ್ದವು ಎಂದು ಅವರು ತಮ್ಮ ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸ್ಥಳೀಯ ಜನರ ಪ್ರೀತಿಯ ಸ್ಪಂದನೆ, ಮಾಲ್ಡಿವ್ ಬಡಾವಣೆಗಳಿಂದ ಹಿಡಿದು ವೈವಿಧ್ಯಮಯ ಧಾರ್ಮಿಕ ಸಾನ್ನಿಧ್ಯಗಳ ವರೆಗೆ ಅನ್ವೇಷಣೆ ಮಾಡಿದ ಅವರು, ‘ಭಾರತದಲ್ಲಿ ದೈವಿಕ ಶಕ್ತಿ ಇದೆ’ ಎಂಬ ಅನಿಸಿಕೆಯಿಂದ ವಿದಾಯ ವೇಳೆಯಲ್ಲಿ ಕಣ್ಣೀರು ತುಂಬಿ ಭಾರತವನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ಬೆಂಗಳೂರಿನ ಮನೆಗಳ ಶೈಲಿ, ಮಾರುಕಟ್ಟೆಗಳ ಚಟುವಟಿಕೆ, ಬೀದಿಗಳ ಸಂಸ್ಕೃತಿಯೆಲ್ಲಾ ಅವರನ್ನು ಆಕರ್ಷಿಸಿತು. ತಮ್ಮ ಮುಂದಿನ ಭೇಟಿವರೆಗೆ ಭಾರತ ಮತ್ತು ಬೆಂಗಳೂರು ಅವರ ಮನಸ್ಸಿನಲ್ಲಿ ಎಂದಿಗೂ ಉಳಿಯಲಿವೆ ಎಂದಿದ್ದಾರೆ.