
ಶಿವಮೊಗ್ಗ: ಟಿವಿ ಮತ್ತು ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ದೃಷ್ಠಿ ದೋಷ ಹೆಚ್ಚುತ್ತಿದ್ದು. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದೊಂದು ವರ್ಷದಲ್ಲಿ ಏಳು ಸಾವಿರಕ್ಕೂ ಹೆಚ್ಚು ಶಾಲೆಯ ಮಕ್ಕಳಲ್ಲಿ ದೃಷ್ಠಿ ದೋಷ ಕಂಡು ಬಂದಿದೆ. ಅದರಲ್ಲೂ 06-16 ವರ್ಷದೊಳಗಿನ ಮಕ್ಕಳಲ್ಲಿ ದೃಷ್ಠಿದೋಷ ಕಂಡುಬರುತ್ತಿದ್ದು. ಇದು ಪೋಷಕರ ಆತಂಕಕ್ಕೆ ಗುರಿಯಾಗಿದೆ. 2024-2025 ಸಾಲಿನ ಜುಲೈನಿಂದ ಡಿಸೆಂಬರ್ವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಬಾಲ ದೃಷ್ಠಿ ಕಿರಣ ಯೋಜನೆಯಡಿಯಲ್ಲಿ ತಪಾಸಣೆ ನಡೆಸಿದ್ದು. ರಾಜ್ಯದಲ್ಲಿ 1.53 ಲಕ್ಷ ಮಕ್ಕಳಲ್ಲಿ ದೃಷ್ಠಿ ದೋಷ ಪತ್ತೆಯಾಗಿದ್ದು ಆತಂಕ ಮಾನೆಮಾಡಿದೆ.