
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಎತ್ತಿನ ಭುಜ ಪ್ರವಾಸಿ ತಾಣದಲ್ಲಿ ಗಂಟೆಗೆ 10.10 ಇಂಚು ಮಳೆಯಾಗುತ್ತಿದ್ದು. ನಿರಂತರ ಮಳೆಯಿಂದ ಗುಡ್ಡ ಹತ್ತುವ ಮಾರ್ಗ ಜಾರುತ್ತಿದೆ. ದಾಖಲೆ ಮಳೆಯಾಗೋ ಘಟ್ಟ ಪ್ರದೇಶದಲ್ಲಿ ಚಾರಣ ಬೇಕೆ ಎಂದು ಸ್ಥಳಿಯರು ಪ್ರಶಿಸಿದ್ದಾರೆ. ಟ್ರಕ್ಕಿಂಗ್ ಬಂದ್ ಮಾಡುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಆಗ್ರಹಿಸದ್ದಾರೆ. ಆನ್ಲೈನ್ ಮುಖಾಂತರ ಬುಕ್ ಮಾಡಿಕೊಂಡು ಬರುತ್ತಿರೋ ಪ್ರವಾಸಿಗರು. ಅತೀ ಹೆಚ್ಚು ಮಳೆಯಿಂದ ಧರೆ ಕುಸಿತ, ಪ್ರವಾಹ ಎದುರಾದರೆ ಹೊಣೆ ಯಾರು? ನೆಟ್ವರ್ಕ್ ಸಮಸ್ಯೆ ಇರೋ ಎತ್ತಿನಭುಜ ಟ್ರಕ್ಕಿಂಗ್ ಸ್ಪಾಟ್. ವನ್ಯ ಮೃಗಗಳು ಓಡಾಟವಿರೋ ದಟ್ಟಾರಣ್ಯದ ನಡುವೆ ಈ ಸ್ಥದಲ್ಲಿ ಅನಾಹುತವಾದರೆ ತಕ್ಷಣವೇ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಅನುಮತಿ ನೀಡುತ್ತಿರುವ ಅರಣ್ಯ ಇಲಾಖೆಯ ವಿರುದ್ಧ ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.