
ಮೂಡಿಗೆರೆ: ಮೂಕ ಪ್ರಾಣಿ ಪ್ರಪಂಚದ ವಿಸ್ಮಯ ಜಗತ್ತು ಅನಾವರಣ. ಬುದ್ಧಿವಂತ ಪ್ರಾಣಿ ಮನುಷ್ಯನ ಪ್ರೀತಿಯನ್ನೂ ಮೀರಿಸಿದ್ದು ಪ್ರಾಣಿ ಪ್ರೀತಿ. ಸತ್ತಿರೋ ಮರಿಯ್ನನ್ನು ಹುಡುಕಿಕೊಂಡು 150ಕಿ.ಮೀ ನಿಂದ ಬಂದ ಕಾಡಾನೆ. ಕೊಡಗು ಜಿಲ್ಲೆಯ ಪಾಲಿ ಬೆಟ್ಟದಿಂದ ಮೂಡಿಗೆರೆಗೆ ಬಂದ ಒಲ್ಟ್ ಬೆಲ್ಟ್ ಕಾಡಾನೆಯು ನಿನ್ನೆ ಬೆಳಗ್ಗೆ ಮಡಿಕೇರಿಯ ಪಾಲಿ ಬೆಟ್ಟದಲ್ಲಿ ಜನರನ್ನು ಓಡಿಸಿದ್ದ ಸಿಸಿಟಿವಿ ವೀಡಿಯೋ ಲಭ್ಯವಾಗಿದೆ. ಸಂಜೆ ವೇಳೆಗೆ ಮರಿ ಹುಡುಕಿಕೊಂಡು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡಿಗೆ ಆಗಮಿಸಿದ ಆನೆ.
ಓಲ್ಡ್ ಬೆಲ್ಟ್ ಕೊರಳಲ್ಲಿರೋ ರೇಡಿಯೋ ಕಾಲರ್ನಿಂದ ಲೊಕೇಶನ್ ಮಾಹಿತಿ ಲಭ್ಯವಾಗಿದೆ. ಸಧ್ಯಕ್ಕೆ ಬೇಲೂರು – ಮೂಡಿಗೆರೆಯ ಗಡಿ ಲಕ್ಷೀ ಎಸ್ಟೇಟ್ನಲ್ಲಿದೆಯೆಂಬ ಮಾಹಿತಿ ಸಿಕ್ಕಿದೆ. ಓಲ್ಡ್ ಬೆಲ್ಟ್ ಮರಿ ತಿಂಗಳುಗಳ ಮುಂಚೆಯೇ ಸಾವನಪ್ಪಿದೆ. ಆದರೆ ಸಾವನಪ್ಪಿರೋ ಮರಿ ಹುಡುಕಿಕೊಂಡು 150 ಕಿ.ಮೀ ಬಂದ ಹೆಣ್ಣಾನೆ.