
ರಾಯಚೂರು : ನಗರದ ಜಿಲ್ಲಾ ಬ್ರಾಹ್ಮಣ ಘಟಕದ ಆಶ್ರಯದಲ್ಲಿ ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷೀಯ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ವೇದಮೂರ್ತಿ ಡಾ. ಭಾನುಪ್ರಕಾಶ್ ಶರ್ಮ ರವರು ಭಾಗವಹಿಸಿ ಚುನಾವಣೆ ಬಗ್ಗೆ ಚರ್ಚಿಸಿ ಕಾರ್ಯಕರ್ತರಿಗೆ ಸಲಹೆ ಸೂಚನೆಗಳನ್ನು ಕೊಟ್ಟು ವಿಪ್ರ ಬಾಂದವರಲ್ಲಿ ಮತಯಾಚಿಸಿದರು. ಇದೇ ಸಂದರ್ಭದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿಕಟಪೂರ್ವ ನಿರ್ದೇಶಕರಾಗಿದ್ದ ಶ್ರೀ ರಾಘವೇಂದ್ರ ಭಟ್, ಶ್ರೀ ರಾಜೇಂದ್ರ ಪ್ರಸಾದ್, ಶ್ರೀ ಅಶ್ವಥ್ ನಾರಾಯಣ ಹೊಸಹಳ್ಳಿ, ಜಿಲ್ಲಾ ಹಾಗೂ ತಾಲೂಕು ಬ್ರಾಹ್ಮಣ ಸಭೆಯ ಸದಸ್ಯರಾದ ಶ್ರೀ ಡಿಕೆ ಮುರಳಿಧರ್, ಡಾ. ಆನಂದ್ ಫಡ್ನಿಸ್, ಶ್ರೀ ವೆಂಕಟೇಶ ದೇಸಾಯಿ, ಶ್ರೀ ರಾಮರಾವ್, ಶ್ರೀ ರಾಘವೇಂದ್ರ ಚೂಡಾಮಣಿ, ಶ್ರೀ ವೇಣುಗೋಪಾಲ್ ವಿನಾಂದ, ಶ್ರೀ ರಮೇಶ್ ಕುಲಕರ್ಣಿ, ಶ್ರೀ ಜೈ ಕುಮಾರ್, ಶ್ರೀ ಪ್ರಹಲ್ಲಾದ ಕುಲಕರ್ಣಿ, ಡಾ. ನಾಗರಾಜ್, ಶ್ರೀ ಅನಿಲ್ ಕುಮಾರ್, ಶ್ರೀ ವಿನೋದ್ ಸಾಗರ್, ಶ್ರೀ ವೆಂಕಟರಾವ್, ಶ್ರೀ ರಮೇಶ್ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.