
ಎನ್.ಆರ್. ಪುರ: ಈ ಹಿಂದಿನ ಚುನಾವಣಾ ಮತ ಎಣಿಕೆ ಸಂದರ್ಭದಲ್ಲಿ ಲೋಪವಾಗಿದೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸದಂತೆ ಶಾಸಕ ಟಿ.ಡಿ ರಾಜೇಗೌಡ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ರಾಜೇಗೌಡರ ಅರ್ಜಿಯನ್ನು ತಿರಸ್ಕರಿಸಿ ಜೀವರಾಜ್ರವರ ವಾದ ಸರಿಯಿದೆ ಈ ವಿಷಯದಲ್ಲಿ ಹೈಕೋರ್ಟ್ ತೀರ್ಮಾನಿಸಲಿ ಎಂದು ಆದೇಶಿಸಿತ್ತು. ನಂತರ ಶಾಸಕ ರಾಜೇಗೌಡ ಹೈಕೋರ್ಟ್ನಲ್ಲಿ ಜೀವರಾಜ್ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯನ್ನು ಪುರಸ್ಕರಿಸದಂತೆ ಹಾಗೂ ರದ್ದು ಮಾಡುವಂತೆ ಮನವಿ ಸಲ್ಲಿಸಿದ್ದರು. ಆದರೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ರಾಜೇಗೌಡರ ಮನವಿಯನ್ನು ತಿರಸ್ಕರಿಸಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.ಹಾಗೂ ಮಾಜಿ ಶಾಸಕ ಡಿ.ಎನ್ ಜೀವರಾಜ್ ವಾದ,ದಾಖಲಾತಿ ಸಮ್ಮತವಾಗಿದೆ ಎಂದು ತೀರ್ಪು ನೀಡಿದೆ. ಈ ಮೂಲಕ ಮಾಜಿ ಶಾಸಕ ಡಿ.ಎನ್ ಜೀವರಾಜ್ಗೆ ಕಾನೂನು ಸಮರದಲ್ಲಿ ಇನ್ನೊಂದು ಹೆಜ್ಜೆ ಜಯ ದೊರೆತಂತಾಗಿದೆ.