
ಕೋಟ: ಈದ್ಮಿಲಾದ್ ಸಂಭ್ರದಿಂದ ನಡೆದಿದ್ದು. ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟು ಪಡುಕೆರೆಯಲ್ಲಿ ಮುಹಿಯುದ್ದೀನ್ ಜುಮಾ ಮಸೀದಿ ಕೋಡಿ ಕನ್ಯಾಣ ವತಿಯಿಂದ ಪ್ರವಾದಿ ಮಹಮ್ಮದ್ ಪೈಗಂಬರ್ರವರ 1500ನೇ ಜನ್ಮದಿನಾಚರಣೆಯನ್ನು ಆಚರಿಸಿದ್ದು, ಕೋಟದ ಕೋಡಿ ಕನ್ಯಾಣ ಮುಹಿಯುದ್ದೀನ್ ಜುಮಾ ಮಸೀದಿಯಿಂದ ಹೊರಟ ರ್ಯಾಲಿ ಪಾರಂಪಳ್ಳಿಗೆ ಹೋಗಿ ಅಲ್ಲಿಂದ ಕೋಟತಟ್ಟು ಸೇರಿ ಬಳಿಕ ಮತ್ತೆ ಕೋಡಿ ಕನ್ಯಾಣದಲ್ಲಿ ಸಮಾಪ್ತಿಯಾಯಿತು. ಮೆರೆವಣಿಗೆಯಲ್ಲಿ ಸಾರ್ವಜನಿಕವಾಗಿ ತಂಪು ಪಾನಿಯಾಮ ಸಿಹಿತಿಂಡಿ, ಐಸ್ಕ್ರೀಮ್ ನೀಡಲಾಯಿತು. ಕ್ಟೋತಟ್ಟು ಹಿಂಧೂ ಬಾಂಧವರು ರ್ಯಾಲಿಗೆ ಬಂದವರಿಗೆ ಐಸ್ಕ್ರೀಮ್ ಹಂಚಿ ಸೌಹಾರ್ಧತೆಯನ್ನು ತೋರಿದರು. ಈ ವೇಳೆ ರತ್ನಾಕರ್ ಶ್ರೀಯನ್ ಕೋಟತಟ್ಟು, ಮಹಾಬಲ ಮಡಿವಾಳ, ಇಲಿಯಾಸ್ ಮಡಿವಾಳ, ಇಲಿಯಾಸ್ ಪಾರಂಪಳ್ಳಿ ಇತರರು ಉಪಸ್ಥಿತರಿದ್ದರು.