
ಇತ್ತೀಚೆಗಿನ ದಿನಗಳಲ್ಲಿ ಆಗಸ್ಟ್ 2 ರಂದು ಭಾರೀ ದೀರ್ಘ ಸೂರ್ಯಗ್ರಹಣ ಸಂಭವಿಸಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೆಲ ವರದಿಗಳ ಪ್ರಕಾರ, ಈ ದಿನ ಭೂಮಿ ಸುಮಾರು 6 ನಿಮಿಷಗಳ ಕಾಲ ಸಂಪೂರ್ಣ ಕಗ್ಗತ್ತಲಿನಲ್ಲಿ ಮುಳುಗುತ್ತದೆ ಎಂಬ ನಂಬಿಕೆ ಇದೆ. ಧಾರ್ಮಿಕವಾಗಿ ಈ ಘಟನೆಗೆ ವಿಶೇಷ ಮಹತ್ವವಿದೆ ಎಂದು ಹೇಳಲಾಗುತ್ತಿದ್ದು, ಪುರಾಣಗಳ ಪ್ರಕಾರ ರಾಹು ಸೂರ್ಯನನ್ನು ನುಂಗುವುದರಿಂದ ಗ್ರಹಣ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ವೈಜ್ಞಾನಿಕವಾಗಿ ನೋಡಿದರೆ, ಆಗಸ್ಟ್ 2, 2025 ರಂದು ಯಾವುದೇ ಸೂರ್ಯಗ್ರಹಣ ಸಂಭವಿಸುವುದಿಲ್ಲ. ವಾಸ್ತವದಲ್ಲಿ, ಇಂತಹ ದೀರ್ಘಗ್ರಹಣ 2027ರ ಆಗಸ್ಟ್ 2ರಂದು ಸಂಭವಿಸುವ ಸಂಭವನೆ ಇದೆ ಮತ್ತು ಅದು ಭಾರತದ ಮೇಲೆ ಹೆಚ್ಚು ಪ್ರಭಾವ ಬೀರುವದಿಲ್ಲ. ಈ ವರ್ಷ 2025ರಲ್ಲಿ ನಾಲ್ಕು ಗ್ರಹಣಗಳಿದ್ದು, ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣಗಳಾಗಿವೆ. ಈಗಾಗಲೇ ಎರಡು ಗ್ರಹಣಗಳು ಸಂಭವಿಸಿ ಹೋಗಿವೆ ಮತ್ತು ಮುಂದಿನ ಸೂರ್ಯಗ್ರಹಣ ಸೆಪ್ಟೆಂಬರ್ 21ರ ರಾತ್ರಿ 11 ಗಂಟೆಯಿಂದ ಸೆಪ್ಟೆಂಬರ್ 22ರ ಬೆಳಿಗ್ಗೆ 3:24 ರವರೆಗೆ ಸಂಭವಿಸುವುದು ನಿಶ್ಚಿತ, ಇದು ಸುಮಾರು 4 ಗಂಟೆ 24 ನಿಮಿಷಗಳ ಕಾಲ ನಡೆಯಲಿದೆ.