
ಪದ್ಮಶ್ರೀ ಪುರಸ್ಕೃತ ಕವಿ ಹಾಗೂ ಮಾಜಿ ಎಂಎಲ್ಸಿ ದೊಡ್ಡರಂಗೇಗೌಡರವರ ಆರೋಗ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾರೆ. ಬಾನುವಾರ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಕಳೆದ ಒಂದು ವರ್ಷಗಳಿಂದ ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿಯಾಗಿದ್ದಾಗಲೇ ಕಥೆ, ಕವಿತೆ, ವಿಮರ್ಶೆಗಳನ್ನು ಬರೆಯುತ್ತಾ ಸುಮಾರು ೫೬ ಕೃತಿಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರುವಾಸಿಯಗಿದ್ದಾರೆ. ಇದುವರೆಗೆ ೫೦೦ ಕ್ಕೂ ಹೆಚ್ಚು ಕನ್ನಡ ಚಲನಚಿತ್ರ ಗೀತೆಗಳನ್ನು ಬರೆದ ಹೆಗ್ಗಳಿಕೆ ಇವರದ್ದಾಗಿದೆ.
ಉತ್ತಮ ಗೀತರಚನೆಗೆ ನಾಲ್ಕು ಬಾರಿ ರಾಜ್ಯಪ್ರಶಸ್ತಿಗೆ ಭಾಜನರಾಗಿದ್ದ ಇವರು . ೨೦೨೧ರ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಡಾ. ಶಿವರಾಜ್ಕುಮಾರ್ ಅಭಿನಯದ ಜನುಮದ ಜೋಡಿ ಚಿತ್ರದ ಹಾಡು ಇವರಿಗೆ ಅಪಾರ ಜನಮನ್ನಣೆ ತಂದು ಕೊಟ್ಟಿತ್ತು. ಶ್ರೀ ದೊಡ್ಡರಂಗೇಗೌಡರ ಆರೋಗ್ಯ ಸುಧಾರಿಸಿ ಬೇಗ ಗುಣಮುಖರಾಗಲಿ ಎಂದು ಆಶಿಸೋಣ.