
ಚನ್ನಗಿರಿ: ಚನ್ನಗಿರಿ ತಾಲೂಕಿನ ನೀತಿಗೆರೆ ಗ್ರಾಮದಲ್ಲಿ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ್ ವಿ ಶಿವಗಂಗಾ ರವರು ಸುದ್ದಿಗಾರರೊಂದಿಗೆ ಮಾತನಾಡಿ, ಸುಕ್ಷೇತ್ರ ಧರ್ಮಸ್ಥಳ ಧರ್ಮದರ್ಶಿಗಳಾದ ಶ್ರೀವೀರೇಂದ್ರ ಹೆಗ್ಗಡೆಯವರು ಇಂದು ರೈತರಿಗೆ, ಬಡ ಜನರಿಗೆ, ನಿರುದ್ಯೋಗಿಗಳಿಗೆ, ರೈತರಿಗೆ ಹಾಗೂ ಮಹಿಳೆಯರಿಗೆ ನೆರವಾಗುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಮುಖ್ಯವಾಗಿ ಮಹಿಳೆಯರ ಸ್ವಾವಲಂಬನೆ ನೆಮ್ಮದಿ ಜೀವನ ನಡೆಸುವ ಉದ್ದೇಶವನ್ನು ಹೊಂದಿದಿರುವವರಾಗಿದ್ದಾರೆ. ಆದರೆ ಇಂದಿನ ವ್ಯವಸ್ಥೆಯಲ್ಲಿ ದುಃಖಕರ ವಿಷಯವಾಗಿದೆ. ನಂಬಲು ಅಸಾಧ್ಯವಾಗಿದೆ.
ಎಸ್ ಐ ಟಿ ತನಿಕೆಯಲ್ಲಿ ಇದುವರೆಗೂ ಯಾವುದೇ ಶವಗಳು ಅಥವಾ ಆಧಾರಗಳು ಸಿಕ್ಕಿಲ್ಲ. ಇದರ ಹಿಂದೆ ಕಾಣದ ಕೈಗಳ ಪಿತೂರಿ ಇದೆ. ಶ್ರೀ ಧರ್ಮಸ್ಥಳ ನಮ್ಮ ರಾಜ್ಯದ ಧಾರ್ಮಿಕ ಭಕ್ತಿ ಕೇಂದ್ರವಾಗಿದ್ದು, ಕೂಡಲೇ ಸರ್ಕಾರ ಪಿತೂರಿ ಮಾಡುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.