
ನಟಿ ದೀಪಿಕಾ ಪಡುಕೋಣೆ ಅಪರೂಪದ ಗೌರವಕ್ಕೆ ಪಾತ್ರರಾಗಿದ್ದಾರೆ. ದೀಪಿಕಾ ಪಡುಕೋಣೆ, ವಾಕ್ ಆಫ್ ಫೇಮ್ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯರು ಎನಿಸಕೊಂಡಿದ್ದಾರೆ. ಅಮೇರಿಕದ ಲಾಸ್ ಎಂಜಲೀಸ್ನ ಹಾಲಿವುಡ್ ಬೌಲೆವಾರ್ಡ್ನಲ್ಲಿ ಹಾಲಿವುಡ್ನ ವಾಕ್ ಆಫ್ ಫೇಮ್ ಇದೆ. ಇಲ್ಲಿ ನೆಲದ ಮೇಲೆ ಸ್ಟಾರ್ ರೀತಿ ಆಕೃತಿಯನ್ನು ನಿರ್ಮಿಸಿ ಅದರಲ್ಲಿ ನಟ-ನಟಿಯರ ಹೆಸರುಗಳನ್ನು ಬರೆದಿರಲಾಗುತ್ತದೆ.