
ಚಿಕ್ಕಮಗಳೂರು: ಹಲವು ಗ್ರಾಮಗಳಲ್ಲಿ ಕಾಡಾನೆ ಉಪಟಳದಿಂದ ಜನರು ಕಂಗೆಟ್ಟಿದ್ದು, ಜನರು ಗದ್ದೆ ತೋಟಗಳಿಗೆ ಹೋಗಲು ಭಯಪಡುತ್ತಿದ್ದರು. ಜೊತೆಗೆ ೧೩ ಗ್ರಾಮಗಳಲ್ಲಿ ನಿಷೇಧಾಜ್ಞೆ ಕೂಡ ಜಾರಿ ಮಾಡಲಾಗಿತ್ತು. ಇದೀಗ ಹಲವೆಡೆ ಶಾಲಾ-ಕಾಲೇಜು, ಅಂಗನವಾಡಿಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಲೂರಿನ ವಸ್ತಾರೆ, ಮೂಗ್ತಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈ ಎರಡೂ ಗ್ರಾ.ಪಂ ವ್ಯಾಪ್ತಿಯ ೧೩ ಗ್ರಾಮಗಳಿಗೆ ನಿಷೆಧಾಜ್ಞೆ ಜಾರಿಗೊಳಿಸಿ, ಶಾಲಾ-ಕಾಲೇಜುಗಳಿಗೂ ಇಂದು ರಜೆ ಘೋಷಿಸಲಾಗಿದೆ.