
ದಾವಣಗೆರೆ : ಚನ್ನಗಿರಿ ತಾಲೂಕು ನೀತಿಗೆರೆ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ 1963 ನೇ ಮಧ್ಯವರ್ಜನೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಚನ್ನಗಿರಿ ವಿಧಾನ ಸಭಾ ಕ್ಷೇತ್ರ ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ.
ಧರ್ಮಸ್ಥಳ ಸಂಸ್ಥೆ ಹಾಗೂ ಧರ್ಮಾಧಿಕಾರಿಗಳ ವಿರುದ್ದ ಪಿತೂರಿ ಮಾಡುವವರ ವಿರುದ್ದ ಕ್ರಮ ಕೈಗೊಳ್ಳ ಬೇಕು.
ಇದೇ ರೀತಿ ಪಿತೂರಿ ನಡೆದರೆ ಚನ್ನಗಿರಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸಿ ಪ್ರತಿಭಟನೆ ಮಾಡಲಾಗುತ್ತದೇ ಎಂದು ಎಚ್ಚರಿಸಿ. ಮುಂದುವರೆದು ಮಾತನಾಡುತ್ತಾ ಧರ್ಮಸ್ಥಳ ಸಂಸ್ಥೆಯ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವುದರೊಂದಿಗೆ ಸ್ವಾವಲಂಬಿಗಳಾಗಿ ಬದುಕಲು ಸ್ವ- ಉದ್ಯೋಗ ತರಬೇತಿಗಳು ಸಣ್ಣ ಪುಟ್ಟ ಸಾಲಗಳಿಗಾಗಿ ಅಲೆದಾಡುವುದನ್ನು ತಪ್ಪಿಸಲು ಸ್ವ- ಸಹಾಯ ಸಂಘ, ಒಕ್ಕೂಟಗಳ ಮೂಲಕ ನೇರ ಸಾಲನೀಡಿ ರೈತರಿಗೆ ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡುವುದಲ್ಲದೇ ವೃದ್ಧರು ವಿಧವೆಯರು ಶಾಲಾ ಮಕ್ಕಳಿಗೆ ವೇತನಗಳನ್ನು ನೀಡುತ್ತಾ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಏಕೈಕ ಸಂಸ್ಥೆ ನಮ್ಮ ಧರ್ಮಸ್ಥಳ ಸಂಸ್ಥೆ, ಇಡಿ ರಾಜ್ಯದಲ್ಲೆ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಎಂದರೇ ಎಲ್ಲರೂ ಭಯ ಭಕ್ತಿ ಇರುವ ಕೇಂದ್ರದ ಮೇಲೆ ಆಪಾದನೆಗಳು ಬಂದರೆ ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎಂದು ತಿಳಿಸಿದರು.