
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅಲ್ಲಿನ ಜನರು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಅದ್ದರಿಂದ ಅಲ್ಲಿನ ಜನರು ಕೃಷ್ಣ ಜನ್ಮಾಷ್ಟಮಿಯ ಸಂಭ್ರಮಾಚಾರಣೆಗಾಗಿ ಮಾರುಕಟ್ಟೆಗಳಿಗೆ ಭೇಟಿ ನೀಡುತ್ತಿದ್ದು, ತಯಾರಿಯು ಭರದಿಂದ ಸಾಗುತ್ತಿದೆ. ಹೂವು, ಹಣ್ಣುಗಳು, ತರಕಾರಿ, ಕಡಬು ತಯಾರಿಸುವ ಮೂಡೆಗಳಗೆ ಭಾರಿ ಬೇಡಿಕೆಯಿದ್ದು, ಶುಂಠಿ ಗಿಡ, ಬಾಳೆ ಎಲೆ, ಹರಿವೆದಂಟು ಹೆಚ್ಚಿನ ಪ್ರಮಾಣದಲ್ಲಿ ಖರೀದಿಯಾಗಿದೆ.
ನಿರಂತರ ಮಳೆಯಿಂದಾಗಿ ತರಕಾರಿಗಳು ಕಡಿಮೆ ಪ್ರಮಾಣದಲ್ಲಿದ್ದು, ಲಭ್ಯವಿರುವ ತರಕಾರಿಗಳ ಬೆಲೆ ಗಗನಕ್ಕೇರಿದೆ. ಹುಣ್ಣಿಮೆ ಅಮಾವಾಸ್ಯೆ ಪ್ರಕಾರ (ಚಂದ್ರಮಾನ) ಕೆಲವು ಜನರು ಆಗಸ್ಟ್ 15ರಂದು ಮಕರ ಸಂಕ್ರಮಣ ಆಚರಿಸುತ್ತಾರೆ. ಸಂಕ್ರಮಣದ ಲೆಕ್ಕಾಚಾರದ ಪ್ರಕಾರ (ಸೌರಮಾನ) ಸೆಪ್ಟೆಂಬರ್ 14ರಂದು ಅಷ್ಟಮಿ ಆಚರಣೆ ನಡೆಯುತ್ತದೆ ಎನ್ನಲಾಗಿದೆ.