
ದಕ್ಷಿಣ ಕನ್ನಡ: ದಿನಾಂಕ 11-08-2025 ರಿಂದ 22-08-2025ರ ವರೆಗೆ ಕರ್ನಾಟಕ ವಿಧಾನಸಭೆ ಮುಂಗಾರು ಅಧಿವೇಶನ ನಡೆಯಲಿದ್ದು. ವಿಧಾನ ಸಭೆಯ ಅಧ್ಯಕ್ಷರಾದ ಯು.ಟಿ ಖಾದರ್ರವರು ಮೊದಲ ದಿನದಂದು 11 ಗಂಟೆಗೆ ಅಧಿವೇಶನ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರವು ವಿಶೇಷ ಎಸ್ಐಟಿ ತನಿಖಾ ತಂಡವನ್ನು ರಚಿಸಿದ್ದು, ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಆದೇಶವನ್ನು ನೀಡಿದೆ. ಅಧಿವೇಶನ ಸಮಯವನ್ನು ಹೆಚ್ಚಿಸುವ ಬಗ್ಗೆ ಸ್ಪೀಕರ್, ಪ್ರತಿ ಪಕ್ಷ ನಾಯಕರು ಮತ್ತು ಮುಖ್ಯಮಂತ್ರಿ ಸೇರಿದಂತೆ ಸಲಹಾ ಸಮೀತಿಯು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ನೀಡಿದ್ದಾರೆ.