
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಗೆ ಮರುನಾಮಕರಣ ಮಾಡುವಂತೆ ಕೂಗು ಕೇಳಿ ಬರುತ್ತಿದ್ದರು. ಹಾಗೆಯೇ ಹಲವು ಪರ-ವಿರೋಧವು ಕೇಳೀ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಎಂಬ ನಾಮಕರಣವಿದ್ದರೂ, ಕೆಲವರು ಮಂಗಳೂರು ಜಿಲ್ಲೆ ಎಂದು ಸಹ ಕರೆಯುತ್ತಾರೆ. ಕರ್ನಾಟಕವನ್ನು ಹೊರತುಪಡಿಸಿ ಹೊರಗಿನವರಿಗೆ ಮಂಗಳೂರು ಚಿರಪರಿಚಯವಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಅಷ್ಟಾಗಿ ಪರಿಚಯವಿರುವುದಿಲ್ಲ. ಜಿಲ್ಲೆಯು ಸ್ಮಾರ್ಟ್ ಸಿಟಿ ಯೋಜನೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಪಡೆದ ಹೆಸರು, ಅಸ್ಪತ್ರೆಗಳ ವ್ಯವಸ್ಥೆಯಲ್ಲಿ ಪಡೆದ ಹೆಸರಿನಿಂದ ಮಂಗಳೂರು ಹೆಸರು ಪಡೆದುಕೊಂಡಿದೆ. ಇದರಿಂದ ಅಧಿಕೃತವಾಗಿ ಮರುನಾಮಕರಣ ಮಾಡುವುದು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿದೆ ಎನ್ನುವುದು ಹಲವರ ಅಭಿಪ್ರಾಯಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು, ಎಂಸಿಎಫ್ ಮುಂತಾದವುಗಳು ಕೈಗಾರಿಕಾ ಸಂಸ್ಥೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಮಂಗಳೂರು ಹೆಸರು ಮಾಡಿದೆ. ಈ ಜಿಲ್ಲೆಯನ್ನು ತುಳುನಾಡು ಎಂದು ಕರೆಯಲಾಗುತ್ತಿದೆ ಆದರೆ ದಕ್ಷಿಣ ಕನ್ನಡ ಎನ್ನುವ ಹೆಸರಿಗೂ ತುಳುನಾಡಿಗೂ ಯಾವುದೇ ಸಂಬಂಧವಿರುವುದಿಲ್ಲ ಎಂದು ಹೇಳಿದ್ದಾರೆ.