
ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಗದ್ದೆ ಹತ್ತಿರದ ತುಪ್ಪೂರು ಗ್ರಾಮದಲ್ಲಿ ಬಿಜೆಪಿ ಮುಖಂಡರಾದ ಅಜಿತ್ ತುಪ್ಪೂರು ರವರಿಗೆ ಸೇರಿದ ಕಾಫಿ ತೋಟದ ಗಿಡಗಳನ್ನು ದುಷ್ಕರ್ಮಿಗಳು ಕಡೆದು ಹಾಕಿದ್ದಾರೆ.2ಎಕರೆ ತೋಟದಲ್ಲಿ 750ಕ್ಕೂ ಹೆಚ್ಚು ಗಿಡಗಳನ್ನು ಕಡೆದಿದ್ದಾರೆ. ಹಲವು ವರ್ಷಗಳಿಂದ ಮಕ್ಕಳಂತೆ ಸಾಕಿ ಬೆಳೆಸಿದ್ದ ಕಾಫಿ ತೋಟವನ್ನು ಕಳೆದುಕೊಂಡು ಬಿಜೆಪಿ ಮುಖಂಡ ಅಜಿತ್ ಹಾಗೂ ಕುಟುಂಬದವರು ಆತಂಕಕೊಳಪಟ್ಟಿದ್ದಾರೆ. ಕೊಪ್ಪ ತಾಲ್ಲೂಕಿನ ಬಾಳೆಹೊನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.