
SRINGERI ಈ ದಿನ ನಮ್ಮ ಭಾರತದ ಮೊದಲ ಪ್ರಧಾನಿ ಹಾಗೂ ಮಕ್ಕಳ ಪಾಲಿನ ಪ್ರೀತಿಯ ಚಾಚಾ ಜವಾಹರಲಾಲ್ ನೆಹರು ಅವರ ಜನ್ಮದಿನ. ಅವರು ಪ್ರತಿಯೊಂದು ಮಗುವನ್ನು ಭಾರತದ ಭವಿಷ್ಯದಂತೆ ಕಂಡವರು. ಇವರು ಮಕ್ಕಳಿಗೆ ಮಾತ್ರವಲ್ಲದೆ ಯುವ ಜನತೆಯ ಅಚ್ಚುಮೆಚ್ಚಿನ ನಾಯಕರಾಗಿದ್ದರು. ಪ್ರತಿ ವರ್ಷ ಭಾರತದಲ್ಲಿ ನವೆಂಬರ್ 14 ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಇದನ್ನು “ಬಾಲ್ ದಿವಸ್” ಎಂದು ಕರೆಯಲಾಗುತ್ತದೆ. ಅಂತೆಯೇ ಇಂದು ದೇಶದಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಶೃಂಗೇರಿ ತಾಲ್ಲೂಕಿನ ಮಸಿಕೆ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಕಾರ್ಮಿಕ ಮಿತ್ರ ಬಳಗದಿಂದ ಸಿಹಿ ಹಂಚಲಾಯಿತು ಈ ಸಂದರ್ಭದಲ್ಲಿ ಕಾರ್ಮಿಕ ಮಿತ್ರ ಬಳಗ ಅಧ್ಯಕ್ಷರಾದ ರಮೇಶ್ ಶೂನ್ಯ, ಕಾರ್ಯದರ್ಶಿ ಜಗದೀಶ್ ಎನ್ ಶ್ರಿಕಾಂತ ಶೂನ್ಯ ಶಾಲೆಯ ಮುಖ್ಯ ಉಪಾಧ್ಯಾಯರು ರಾಜೇಶ್, ವರದಿಗಾರರಾದ ಅಬೂಬುಕ್ಕರ್ ಹಾಗೂ ಸುಮಂಗಲಾ ಆನಂದ್ ಸ್ವಾಮಿ, ಆನಂದ್ ಸ್ವಾಮಿ ಉಪಸ್ಥಿತರಿದ್ದರು