
ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಂದು ಗ್ರಾಮದಲ್ಲಿ, ಕಡು ಬಡತನದ ಸಂಕಷ್ಟದಿಂದ ಬಳಲುತ್ತಿದ್ದ ಕೂಲಿ ಕಾರ್ಮಿಕ ದಂಪತಿಗಳು, ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ಜನಿಸಿದ ತಮ್ಮ ಮುದ್ದಾದ ಗಂಡು ಮಗುವನ್ನು ಒಂದೇ ದಿನಕ್ಕೆ ಬೇಡವೆಂದು ನಿರ್ಧರಿಸಿ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಿದರು. ಈಗಾಗಲೇ ನಾಲ್ಕು ವರ್ಷದ ಮಗುವನ್ನು ಸಾಕುವ ಕಷ್ಟದಲ್ಲಿದ್ದ ಈ ದಂಪತಿಗಳು, ಹೊಸ ಹುಟ್ಟಿದ ಮಗುವಿನ ಹೊಣೆ ಹೊರುವ ಸಾಮರ್ಥ್ಯವಿಲ್ಲವೆಂದು ತಿಳಿಸಿದ್ದರು. ವಿಚಾರ ತಿಳಿದ ಮಕ್ಕಳ ರಕ್ಷಣಾ ಇಲಾಖೆಯ ಸಿಬ್ಬಂದಿಗಳು ಮಗುವನ್ನು ವಿಕಸನ ಸಂಸ್ಥೆಯ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದು, 60 ದಿನಗಳವರೆಗೆ ತಮ್ಮ ವಶದಲ್ಲಿಡಲು ನಿರ್ಧರಿಸಿದ್ದಾರೆ. ಈ ಅವಧಿಯಲ್ಲಿ ಹೆತ್ತವರು ಮನಸ್ಸು ಬದಲಿಸಿಕೊಂಡು ಮಗುವನ್ನು ಮರಳಿ ಪಡೆಯಲು ಮುಂದಾದರೆ ಕಾನೂನು ಪ್ರಕ್ರಿಯೆ ಮೂಲಕ ವಾಪಸು ನೀಡಲಾಗುತ್ತದೆ; ಇಲ್ಲದಿದ್ದರೆ, ನಿಯಮಾನುಸಾರ ಮಗುವನ್ನು ದತ್ತು ಪಡೆಯಲು ಬಯಸುವವರಿಗೆ ನೀಡಲಾಗುತ್ತದೆ. ಸದ್ಯ, ಮಗು ಸಾಂತ್ವಾನ ಕೇಂದ್ರದಲ್ಲಿದ್ದು, ಮುಂದೆ ಅದು ಶಾಶ್ವತವಾಗಿ ಹೆತ್ತವರಿಂದ ದೂರವಾಗುತ್ತದೆಯೇ ಅಥವಾ ಅವರ ಹೃದಯ ಮಗು ಕಡೆ ತಿರುಗುತ್ತದೆಯೇ ಎಂಬುದು ಕಾದು ನೋಡಬೇಕಾಗಿದೆ.