
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕು ಆವತಿ ಹೋಬಳಿ ಐದಳ್ಳಿ ಗ್ರಾಮದಲ್ಲಿ ಪ್ರತಿ ದಿನ ನಿಲ್ಲದ ಆನೆ ಹಾವಳಿ ಮತ್ತೆ ಅರುಣಕುಮಾರ, ಮಂಜುನಾಥ್, ಲೋಕೇಶ್ ,ಐ ಡಿ ರುದ್ರೇಗೌಡ ಇವರ ತೋಟದಲ್ಲಿ ಬಾಳೆ ತೆಂಗು ಅಡಿಕೆ ಕಾಫಿ ಬೆಳೆ ನಾಶ ಮಾಡಿದೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿದ್ರೆ ಸಿಬ್ಬಂದಿಗಳು ಬೇರೆ ಕಡೆ ಹೋಗಿದ್ದಾರೆ ಅನ್ನುತ್ತಾರೆ, ಬೆಳೆ ಹಾನಿ ಜೊತೆಗೆ ಮನೆಯಿಂದ ಹೊರಗೆ ಬರುವುದೇ ಕಷ್ಟ ಅನ್ನೋ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಬೆಳೆಗಳು ನಾಶ ಆದರೆ ರೈತರು ಜೀವನ ಮಾಡುವುದು ಹೇಗೆ ಮಾನ್ಯ ಶಾಸಕರು ದಯವಿಟ್ಟು ಗಮನಹರಿಸಬೇಕು ಆನೆ ಹಾವಳಿ ಇಂದ ಶಾಶ್ವತ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.