
ಚಿಕ್ಕಮಗಳೂರು: ಶರಣ್ ಪಂಪ್ ವೆಲ್ಗೆ ಚಿಕ್ಕಮಗಳೂರಿಗೆ ಒಂದು ತಿಂಗಳ ಕಾಲ ಸಂಪೂರ್ಣ ನಿಷೇಧ ಹೇರಿದ ಜಿಲ್ಲಾಡಳಿತ. ದಿನಾಂಕ 06-07-2025 ರಿಂದ04-08-2025 ರ 30 ದಿನಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಶರಣ್ ಪಂಪ್ ವೆಲ್ ಮೇಲೆ 22ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಚಿಕ್ಕಮಗಳೂರು, ಮೂಡಿಗೆರೆ, ಆಲ್ದೂರುನಲ್ಲಿ ಪಂಪ್ ವೆಲ್ ಕರೆಸಿ ಬೈಠಕ್ ಹಮ್ಮಿಕೊಂಡಿದ್ದಾರೆ. ಪಂಪ್ ವೆಲ್ ಬಲಪಂಥೀಯ ನಿಲುವಿನಿಂದ ಪ್ರಭಾವಿತರಾಗಿದ್ದಾರೆ. ಕೋಮುದ್ವೇಷ ಹರಡುವ ಭಾಷಣ ಮಾಡುವ ಪ್ರವೃತ್ತಿ ಉಳ್ಳವರಾಗಿದ್ದಾರೆ. ಇವರ ಪ್ರಚೋದನಾಕಾರಿ ಭಾಷಣದಿಂದ ಗಲಾಟೆ, ಗುಂಪುಘರ್ಷಣೆ ಸನ್ನಿವೇಶಗಳಿವೆ. ಚಿಕ್ಕಮಗಳೂರು ಸೇರಿ ಕೆಲ ಪಟ್ಟಣಗಳು ಮತೀಯ ಸೂಕ್ಷ್ಮ ಪ್ರದೇಶವಾಗಿದೆ. ಸಣ್ಣ ಘಟನೆಯು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಭಂಗ ತರುವ ಸಾಧ್ಯತೆಗಳಿವೆ ಹಾಗಾಗಿ ಮುಂದಿನ 30 ದಿನಗಳ ಕಾಲ ಪಂಪ್ ವೆಲ್ಗೆ ಚಿಕ್ಕಮಗಳೂರು ಜಿಲ್ಲೆಗೆ ಬರದಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.