
ಚಿಕ್ಕಮಗಳೂರು: ಕಾಫಿತೋಟ, ಗ್ರಾಮ, ರಾಜ್ಯ ಹೆದ್ದಾರಿಯಲ್ಲೂ ಕಾಡಾನೆಗಳ ಉಪಟಳ ನೀಡುತ್ತಿದ್ದು. ಕಾಫಿ ತೋಟದಲ್ಲಿ ಕಾಡಾನೆ ರೌಂಡ್ಸ್ನಿಂದ ಕಾಫಿ ತೋಟಗಳು ಧ್ವಂಸವಾಗುತ್ತಿದೆ. ಈ ಘಟನೆಯು ಮೂಡಿಗೆರೆ ತಾಲ್ಲೂಕಿನ ಕುನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಧರ್ಮಪಾಲ್, ರವೀಂದ್ರ, ಶ್ರೀಕಾಂತ್ ಹಾಗೂ ರವಿ ಎಂಬುವವರ ತೋಟವನ್ನು ನಾಶ ಮಾಡಿದೆ. ಕುನ್ನಳ್ಳಿ ಗ್ರಾಮದಲ್ಲಿ ಕಾಡಾನೆಯಿಂದ ವ್ಯಕ್ತಿ ಮೇಲೆ ದಾಳಿಯಾಗಿತ್ತು. ತೋಟ, ಗ್ರಾಮಗಳಲ್ಲಿ ಕಾಡಾನೆ ಓಡಾಟದಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.