
ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು, ಲೈಟ್ ಕಂಬವನ್ನು ಜೊತೆಗೆ ೫೦ ಅಡಿ ಎಳೆದುಕೊಂಡು ಹೋಗಿದೆ.. ಕಂಬಕ್ಕೆ ಡಿಕ್ಕಿಯಾಗುತ್ತಿದ್ದಂತೆ ಓಪನ್ ಆದ ಏರ್ ಬ್ಯಾಗ್ ಚಾಲಕನ ಜೀವವನ್ನು ಉಳಿಸಿದೆ. ಡಿಕ್ಕಿ ರಭಸಕ್ಕೆ ನೆಲದಲ್ಲಿ ಹೂತಿದ್ದ ಕಂಬ ಹಾಗೂ ಗ್ರೌಂಡಿಗ್ ವೈರ್ ಕೂಡಾ ಕಿತ್ತು ಹೋಗಿದೆ. ಕಂಬ ಮುರಿದು ಬೀಳುತ್ತಿದ್ದಂತೆಯೆ ಕಟ್ ಆದ ವಿದ್ಯುತ್ ಸಂಪರ್ಕ, ಭಾರಿ ಪ್ರಮಾಣ ಅನಾಹುತ ತಪ್ಪಿದೆ. ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.