
ಚಿಕ್ಕಮಗಳೂರು: ಕಾಫಿನಾಡಿಗರ ದಶಕಗಳ ಕನಸು ಇಂದು ನನಸಾಗಿದೆ. ಚಿಕ್ಕಮಗಳೂರಿನಿಂದ ತಿರುಪತಿಗೆ ರೈಲಿಗೆ ಇಂದು ಚಾಲನೆ ದೊರತಿದ್ದು. ರೈಲ್ವೆ ರಾಜ್ಯ ಸಚಿವ ವಿ ಸೋಮಣ್ಣ ಚಾಲನೆ ನೀಡಿದ್ದಾರೆ. ಚಿಕ್ಕಮಗಳೂರಿನಿಂದ ವಾರಕ್ಕೊಮ್ಮೆ ತಿರುಪತಿಗೆ ಹೋಗಲಿರೋ ರೈಲು ಕರ್ನಾಟಕ ಹಾಗೂ ಆಂಧ್ರಪ್ರದೇಶಕ್ಕೆ ಸುಗಮವಾಗಿ ಸಂಚರಿಸಲು ಪ್ರಯಾಣಿಕರಿಗೆ ಸಾಧ್ಯವಾಗಿದೆ. ಚಿಕ್ಕಮಗಳೂರು ರೈಲ್ವೆ ನಿಲ್ದಾಣದಲ್ಲಿ ಸೋಮಣ್ಣ ಹಸಿರು ನಿಶಾನೆಯನ್ನು ತೋರಿಸಿದ್ದಾರೆ.