
ಚಿಕ್ಕಮಗಳೂರು: ಕರ್ನಾಟಕ ಹಾಗೂ ತಿರುಪತಿ ಹೊಸ ರೈಲಿಗೆ ಶುಕ್ರವಾರ ವಿ ಸೋಮಣ್ಣ ಚಾಲನೆ ನೀಡಲಿದ್ದು. ಇದು ಆಂಧ್ರಪ್ರದೇಶ ಹಾಗೂ ಕರ್ನಾಟಕದ ಮಲೆನಾಡು ಪ್ರದೇಶದ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಜುಲೈ 17-18 ರಿಂದ ನಿಯಮಿತ ಸೇವೆಗಳು ಆರಂಭವಾಗಲಿದ್ದು, ಈ ರೈಲುಗಳು 18 ಎಲ್.ಹೆಚ್.ಬಿ ಕೋಚ್ಗಳನ್ನು ಒಳಗೊಂಡಿರುತ್ತದೆ.
ಚಿಕ್ಕಮಗಳೂರು – ತಿರುಪತಿ ಉದ್ಘಾಟನಾ ವಿಶೇಷ ಎಕ್ಸ್ಪ್ರೆಸ್ ಜುಲೈ 11ರಂದು ಚಲಿಸಲಿದ್ದು, ಮಧ್ಯಾಹ್ನ 12 ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಮರುದಿನ ಬೆಳುಗ್ಗೆ 2.30ಕ್ಕೆ ತಿರುಪತಿಗೆ ತಲುಪಲಿದೆ.
ರೈಲ್ವೆ ಅಧಿಕಾರಿಗಳು, ಹೊಸ ಸಾಪ್ತಾಹಿಕ ಎಕ್ಸ್ಪ್ರೆಸ್ ಸೇವೆಯಿಂದ ಮಧ್ಯಂತರ ಪಟ್ಟಣ ಹಾಗೂ ಜಿಲ್ಲೆಗಳ ಜನತೆಗೂ ಇದರಿಂದ ಲಾಭವಾಗಲಿದೆ ಎಂದು ತಿಳಿಸಿದರು. ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಅನುಕೂಲಕರ ಸಾರಿಗೆಯಾಗಿ ಹೊಸ ಸಪ್ತಾಹಿಕ ಎಕ್ಸ್ಪ್ರೆಸ್ ಸೇವೆ ನೀಡಲಿದೆ ಎಂದರು.
ರೈಲು ಸಂಖ್ಯೆ17423 ತಿರುಪತಿ – ಚಿಕ್ಕಮಗಳೂರು ಸಾಪ್ತಾಹಿಕ ಎಕ್ಸ್ಪ್ರೆಸ್ ಪ್ರತೀ ಗುರುವಾರ ರಾತ್ರಿ 21:00 ಗಂಟೆಗೆ ತಿರುಪತಿಯಿಂದ ಹೊರಟು, ಶುಕ್ರವಾರ ಬೆಳಗ್ಗೆ 10:30 ಕ್ಕೆ ಚಿಕ್ಕಮಗಳೂರಿಗೆ ತಲುಪಲಿದೆ. ಈ ಮಾರ್ಗದಲ್ಲಿ ರೈಲು 18 ನಿಲ್ದಾಣಗಳಲ್ಲಿ ನಿಲ್ಲಲಿದೆ.
ಹಾಗೆಯೇ ರೈಲು ಸಂಖ್ಯೆ 17424 ಚಿಕ್ಕಮಗಳೂರು – ತಿರುಪತಿ ಸಾಪ್ತಾಹಿಕ ಎಕ್ಸ್ಪ್ರೆಸ್ ಪ್ರತೀ ಶುಕ್ರವಾರ ಸಂಜೆ 5:30ಕ್ಕೆ ಚಿಕ್ಕಮಗಳೂರಿನಿಂದ ಹೊರಟು, ಶನಿವಾರ ಬೆಳಿಗ್ಗೆ7:30ಕ್ಕೆ ತಿರುಪತಿಗೆ ತಲುಪಲಿದೆ.