
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕಿನ ಅಲ್ಲಂಪುರ ಗ್ರಾಮದಲ್ಲಿ ರಂಜಿತಾ ಎನ್ನುವ ಮಹಿಳೆಯು ಗಂಡನ ಜೊತೆ ಜಗಳವಾಡಿ ಕೆರೆ ಹಾರಿದ್ದು. ನೀರಿಗೆ ಬಿದ್ದ ಮೇಲೆ ಬದುಕಿಸುವಂತೆ ಆಂಜನೇಯನನ್ನು ಬೇಡುತ್ತಿದ್ದ ಮಹಿಳೆ, ಆಂಜನೇಯ ಕಾಪಾಡು… ಆಂಜನೇಯ ಕಾಪಾಡು ಎಂದು ಕೂಗಿದ್ದಾಳೆ. ಪಕ್ಕದ ಹೋ ಸ್ಟೇ ಮಾಲಿಕ ರಮೇಶ್ ನೋಡಿ ಸ್ಥಳಕ್ಕೆ ಬಂದು ಹುಡುಗರನ್ನು ಕರೆಸಿದ್ದಾರೆ. ಸಮಂತ್ ಹಾಗೂ ಪ್ರಸನ್ನ ತಕ್ಷಣ ನೀರಿಗೆ ಹಾರಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಚಿಕ್ಕಮಗಳೂರು ನಗರದ ರಾಮನಹಳ್ಳಿ ನಿವಾಸಿ ರಂಜಿತಾ, ಕೆರೆಗೆ ಹಾರಿ ಮುಳುಗಿ ತೇಲಾಡಿ, ಕೂಗಾಡಿ ಬದುಕಿದ್ದು. ಮಹಿಳೆಯ ಹಣೆ ಬರಹ ಹಟ್ಟಿ ಇತ್ತು ಎನ್ನಿಸುತ್ತದೆ. ನೀರಿಗೆ ಬಿದ್ದರೂ ನರಳಾಡಿ ಬದುಕಿದ್ದಾರೆ.