
ಜಾರ್ಜಿಯಾ: ಬುಧವಾರ ನಡೆದ ಸೆಮಿಫೈನಲ್ ಚೆಸ್ ಪಂದ್ಯದಲ್ಲಿ1.5- 0.5 ಅಂಕಗಳಿಂದ ದಿವ್ಯ ದೇಶ್ಮುಖ್, 2017ರ ವಿಶ್ವ ಚಾಂಪಿಯನ್ರಾದ ಜೋಂಗಿ ಟಾನ್ ವಿರುದ್ಧ ಗೆದ್ದು ತಮ್ಮ ಸಾಧನೆಗೆ ಮೆಟ್ಟಿಲು ಮಾಡಿಕೊಂಡಿದ್ದರು. ಈದೀಗ ಚೆಸ್ ವಿಶ್ವಕಪ್ನ ಫೈನಲ್ಗೆ ಅರ್ಹತೆಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಇತಿಹಾಸ ಪುಟದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ನಂತರ ಚೀನಾ ವಿರುದ್ಧ ಪಂದ್ಯವು ಡ್ರಾ ಆಗಿದ್ದು, ಎದುರಾಳಿಯವರು ತಮ್ಮ ಕೌಶಲವನ್ನು ಮರೆಯುವಂತೆ ಮಾಡಿದ್ದಾರೆ. ಗುರುವಾರ ನಡೆಯುವ ಟೈ ಬ್ರೆಕರ್ ಸುತ್ತಿನಲ್ಲಿ ಜಯಶಾಲಿಯ ಪಟ್ಟ ನಿರ್ಧರವಾಗಲಿದೆ.