
ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಚಾರ್ಮಡಿ ಘಾಟಿ ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ರಸ್ತೆಯ ಸ್ಥಿತಿ ಹಗಲೂ ಕೂಡ ಅಪಾಯಕಾರಿಯಾಗಿದ್ದು, ರಾತ್ರಿ ವೇಳೆ ಮತ್ತಷ್ಟು ಭಯಾನಕವಾಗಿದೆ.
ಚಾರ್ಮಡಿ ರಸ್ತೆಯಲ್ಲಿ ಕವಿದಿರುವ ಮಂಜು ಎಷ್ಟು ದಟ್ಟವೆಂದರೆ, ಹೆಡ್ ಲೈಟ್ ಹಾಕಿದರೂ ೫ ಅಡಿ ದೂರಕ್ಕೂ ಗೋಚರವಾಗುತ್ತಿಲ್ಲ. ತಿರುವುಗಳು, ಗುಡ್ಡ ಪ್ರಪಾತಗಳ ನಡುವುವಿನ ಸಂಚಾರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ತಿರುವುಗಳಲ್ಲಿ ಹಾರನ್ ಬಾರಿಸಿ ಸಾಗುವುದು ಉತ್ತಮ. ಹೆಡ್ ಲೈಟ್ ಕೂಡಲೇ ಸಕ್ರಿಯವಾಗಿ ಇರಲಿ. ಮಂಜು ತುಂಬಿದ ರಸ್ತೆಯಲ್ಲಿ ಪ್ರತ್ಯೇಕವಾಗಿರಬೇಡಿ, ಸಹಚರ ವಾಹನಗಳೊಂದಿಗೆ ಪ್ರಯಾಣಿಸಿ, ಸಾಧ್ಯವಾದರೆ ರಾತ್ರಿ ಪ್ರಯಾಣ ತಪ್ಪಿಸಿ.
ಸ್ಥಳೀಯರ ಎಚ್ಚರಿಕೆ: ಹಗಲಲ್ಲೇ ಮುಂದೆ ಎಷ್ಟು ದೂರ ಇದೆ ಅಂತ ತಿಳಿಯುವುದಿಲ್ಲ. ಹೆಡ್ ಲೈಟ್ ಹಾಕಿದರೂ ಪ್ರಯೋಜನವಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಸಂಚಾರಿ ಇಲಾಖೆ ಕೂಡಾ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಎಚ್ಚರಿಕೆಯ ಸೂಚನೆ ನೀಡಿದ್ದಾರೆ
ಪ್ರಸ್ತುತ ಸ್ಥಿತಿ: ವಾಹನಗಳ ಸಂಚಾರ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಹಲವು ಕಡೆ ಟ್ರಾಫಿಕ್ ಜಾಮ್ ಕೂಡಾ ಉಂಟಾಗುತ್ತಿದೆ.