
ಚಾಮರಾಜನಗರ: ಭಾರತದ ಸನಾತನ ಧರ್ಮದ ಶ್ರೇಷ್ಠ ಗ್ರಂಥವಾದ ಭಗವದ್ಗೀತೆಯನ್ನು ನೀಡಿ ಸಹಸ್ರ ವರ್ಷಗಳ ಕಾಲ ಮಾನವನ ಜೀವನ, ಬದುಕು, ಸಾರ್ಥಕತೆಯ ಮೌಲ್ಯಗಳ ಸಂದೇಶವನ್ನು ಸಾರಿದ ಭಗವಂತನಾದ ಶ್ರೀ ಕೃಷ್ಣ ಭಾರತದ ಆಧಾರ ಸ್ತಂಭವೆಂದು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಶ್ರೀ ಕೃಷ್ಣ ಪ್ರತಿಷ್ಠಾನದ ರಥ ಬೀದಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಚಾಮರಾಜನಗರ ಜಿಲ್ಲೆಯಲ್ಲಿ ಶ್ರೀ ಕೃಷ್ಣ ಪ್ರಜ್ಞೆಯನ್ನು ೨೦೧೦ರಿಂದ ಮೊಸರು ಮಡಿಕೆ ಒಡೆಯುವ ಉತ್ಸಾವ, ಬಲರಾಮ ಜಯಂತಿ, ರಾಧಾ ಜಯಂತಿ ಹಾಗೂ ಶ್ರೀ ಕೃಷ್ಣ ಜಯಂತಿ ಆಚರಿಸುವ ಮೂಲಕ ಆಧ್ಯಾತ್ಮಿಕ ಜಾಗ್ಋತಿ ಹಾಗೂ ಮಾನವನ ಕಲ್ಯಾಣಕ್ಕೆ ಹಾಗೂ ಪ್ರತಿಭಾ ವಿಕಾಸಕ್ಕೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಆಗಸ್ಟ್ ೩೧ರ ಭಾನುವಾರ.
ರಥದ ಬೀದಿಯಲ್ಲಿ ಬೃಹತ್ ಮೊಸರು ಮಡಿಕೆ ಒಡೆಯುವ ಉತ್ಸವವನ್ನು ಆಯೋಜಿಸಲಾಗಿದೆ. ತಮಿಳುನಾಡು, ಕರ್ನಾಟಕದ ವಿವಿಧ ಕಡೆಯಿಂದ ಮೊಸರು ಮಡಿಕೆ ಒಡೆಯುವ ಉತ್ಸವದ ತಂಡಗಳು ಆಗಮಿಸಲಿವೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವದ ಅಂಗವಾಗಿ ಶ್ರೀ ಕೃಷ್ಣ ಕವನ ಸ್ಪರ್ಧೆ, ಶ್ರೀ ಕೃಷ್ಣ ಕೆಸರು ಗದ್ದೆ ಓಟ, ಶ್ರೀ ಕೃಷ್ಣ ಕಬ್ಬಡ್ಡಿ ಸ್ಪರ್ಧೆ ಹಾಗೂ ಶ್ರೀ ಕೃಷ್ಣ ಹೂ ಕಟ್ಟುವ ಸ್ಪರ್ಧೆ ಹಮ್ಮಿಕೊಳ್ಳುವ ಜೊತೆಗೆ ದೇಶಿಯ ಆಟಗಳ ಜಾಗೃತಿ ಕಾರ್ಯಕ್ರಮವನ್ನು ರೂಪಿಸಲಾಗಿದೆ.
೨೦ಅಡಿ ಎತ್ತರದ ಕಂಬಕ್ಕೆ ಕಟ್ಟಿರುವ ಮಡಿಕೆಯಲ್ಲಿ ಬೆಣ್ಣೆ ಹಾಗೂ ಮೊಸರು ಒಡೆಯುವ ತಂಡಗಳು ೧೫ ಯುವಕರ ಸಂಖ್ಯೆಗೆ ಅನುಗುಣವಾಗಿ ಗುಂಪನ್ನು ರಚಿಸಿಕೊಂಡು ಆಗಮಿಸಬೇಕು. ಮಾರ್ಗದರ್ಶನಕ್ಕಾಗಿ ೯೯೦೨೩೧೭೬೭೦ ಸಮಪರ್ಕಿಸಬೇಕೆಂದು ತಿಳಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾನದ ಪ್ರದೀಪ್ ಕುಮಾರ್ ದೀಕ್ಷಿತ್, ಯುವ ಮುಖಂಡರಾದ ಚಂದ್ರಶೇಖರ್, ಬೆಂಗಳೂರಿನ ಸತೀಶ್, ವಿನೋದ್, ಹರದನಹಳ್ಳಿ ಉಮೇಶ್ ಮತ್ತು ವಾಸು ಉಪಸ್ಥಿತರಿದ್ದರು.