
ಮೊಸರು: ಚಳಿಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು, ಕಫ ಹೆಚ್ಚಾಗುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದ್ದರೂ, ಎಲ್ಲರಿಗೂ ಇದು ಅನ್ವಯಿಸುವುದಿಲ್ಲ ಎಂದು ಆಹಾರ ತಜ್ಞರು ಹೇಳುತ್ತಾರೆ. ಶೀತ–ಕೆಮ್ಮಿನ ಸಮಸ್ಯೆ ಇಲ್ಲದವರು ಯಾವುದೇ ಋತುವಿನಲ್ಲೂ ಮೊಸರು ಅಥವಾ ಮಜ್ಜಿಗೆ ಸೇವಿಸಬಹುದು. ಪ್ರೊಬಯಾಟಿಕ್ ಅಂಶಗಳಿಂದ ಸಮೃದ್ಧವಾಗಿರುವ ಮೊಸರು ಜೀರ್ಣಕ್ರಿಯೆಯನ್ನು ಸುಧಾರಿಸಿ, ಆಸಿಡಿಟಿ, ಅಜೀರ್ಣ ಮುಂತಾದ ಸಮಸ್ಯೆಗಳಿಂದ ರಕ್ಷಣೆ ನೀಡುತ್ತದೆ. ಜೊತೆಗೆ ಕ್ಯಾಲ್ಶಿಯಂ, ವಿಟಮಿನ್ ಬಿ12, ಪ್ರೋಟೀನ್ಗಳಂತಹ ಪೋಷಕಾಂಶಗಳು ಮೂಳೆಗಳ ಬಲ, ರೋಗ ನಿರೋಧಕ ಶಕ್ತಿ ಮತ್ತು ದೇಹದ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತವೆ. ಚಳಿಗಾಲದಲ್ಲಿ ಮೊಸರನ್ನು ಅತಿಯಾಗಿ ತಣ್ಣಗೆ ಸೇವಿಸದೇ, ವಾತಾವರಣದ ಉಷ್ಣತೆಯಲ್ಲಿ ಅಥವಾ ಬಿಸಿ ಅಡುಗೆಗಳೊಂದಿಗೆ ಬಳಸುವುದು ಉತ್ತಮ. ಆದರೆ ಮೊಸರು ಸೇವಿಸಿದ ಬಳಿಕ ಹೊಟ್ಟೆ ತೊಂದರೆ, ಕಫ ಹೆಚ್ಚಾಗುವುದು ಅಥವಾ ಅಸ್ತಮಾ ಸಮಸ್ಯೆ ಉಂಟಾದರೆ ರಾತ್ರಿ ಸಮಯದಲ್ಲಿ ಮೊಸರು ತಪ್ಪಿಸುವುದು ಒಳಿತು. ಒಟ್ಟಾರೆ, ದೇಹದ ಸ್ವಭಾವಕ್ಕೆ ತಕ್ಕಂತೆ ಮಿತ ಪ್ರಮಾಣದಲ್ಲಿ ಮೊಸರು–ಮಜ್ಜಿಗೆ ಸೇವಿಸುವುದರಿಂದ ಚಳಿಗಾಲದಲ್ಲೂ ಆರೋಗ್ಯ ಲಾಭ ಪಡೆಯಬಹುದು.






