ನವದೆಹಲಿ: ಇಷ್ಟು ದಿನಗಳವರೆಗೆ ಸುಪ್ರೀಂಕೋರ್ಟ್ನಲ್ಲಿ ಕೆಲವೇ ಹಿರಿಯ ವಕೀಲರ ಪ್ರಾಬಲ್ಯ ನಡೆದು, ತಮ್ಮ ಪ್ರಕರಣಗಳನ್ನು ಮೊದಲು ವಿಚಾರಣೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದರು. ಆದರೆ ಇದೀಗ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್ ಅವರು ಆ ಸಂಸ್ಕೃತಿಗೆ ತೆರೆ ಎಳೆದು, ಮುಂದೆ ಇಂತಹ ಪ್ರಾಧಾನ್ಯತೆಗೆ ಅವಕಾಶ ಇರುವುದಿಲ್ಲ, ಈ ವಿಐಪಿ ಸಂಸ್ಕೃತಿಗೆ ಅಂತ್ಯಹಿಡಿದು, ಎಷ್ಟೇ ಹಿರಿಯ ವಕೀಲರಾಗಿದ್ದರೂ, ಪ್ರಕರಣವನ್ನು ಮೊದಲು ವಿಚಾರಣೆ ಮಾಡಲು ಕಾರಣ ಮತ್ತು ವಿವರಗಳೊಂದಿಗೆ ಅಧಿಕೃತ ಮನವಿ ಸಲ್ಲಿಸಬೇಕು ಇಲ್ಲದಿದ್ದರೆ ಅವರು ಸಹ ಇತರರಂತೆ ಕಾಯಬೇಕಾಗುತ್ತದೆ ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಈ ನಿರ್ಧಾರವು ನ್ಯಾಯಾಂಗದಲ್ಲಿ ಸಮಾನತೆಯನ್ನು ಬಿತ್ತರಿಸುವ ಮಹತ್ವದ ಹೆಜ್ಜೆಯಾಗಿದ್ದು, ಈ ಬಗ್ಗೆ ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
