
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹುಸಿ ಬಾಂಬ್ ಬೆದರಕೆ ಬರುತ್ತಿದ್ದು , ಈ ರೀತಿ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಅಂತದ್ದೆ ಘಟನೆ ಈಗ ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಎಲ್ಲರ ತಲೆ ಕೆಡಿಸಿದೆ. ಕಿಡಿಗೇಡಿಗಳು ಈಗ ಬೆಂಗಳೂರಿನಲ್ಲಿ ಇ-ಮೇಲ್ ಮೂಖಾಂತರ ಬೆಂಗಳೂರು ನಗರದ 40ಕ್ಕೂ ಹೆಚ್ಚೂ ಶಾಲೆಗಳಿಗೆ 40 ಕ್ಕೂ ಹೆಚ್ಚೂ ಬಾಂಬ್ ಇಟ್ಟಿರುವುದಾಗಿ ಆರೋಪ ಕೇಳಿ ಬಂದಿದ್ದು ಪೋಷಕರು ಆತಂಕ ಪಡುವಂತಾಗಿದೆ. ರೋಡ್ಕಿಲ್ ಆಟೋಮಿಕ್ ಎಂಬ ಇ-ಮೇಲ್ ಮೂಲಕ ಈ ಸಂದೇಶ ಬಂದಿದ್ದು, ಬೆದರಿಕೆ ಬಂದ ಶಾಲೆಗಳಲ್ಲಿ ಸ್ಕ್ವಾಡ್ ಸಿಬ್ಬಂದಿ ಪರಿಶೀಲನೆ ಮಾಡಿ, ಕಟ್ಟೆಚ್ಚರ ವಹಿಸಲಾಗಿದೆ. ಹಲವು ಪೋಷಕರು ತಕ್ಷಣ ತಮ್ಮ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗಿದ್ದು, ಈ ವಿಷಯ ಸರ್ವಾಜನಿಕ ವಲಯದಲ್ಲಿ ಬಾರಿ ಆಕ್ರೋಶಕ್ಕೆ ವಳಗಾಗುತ್ತಿದೆ.